ಬಿಬಿಎಂಪಿ ಗದ್ದುಗೆ ಗುದ್ದಾಟ: 3 ಪಕ್ಷೇತರ ಸದಸ್ಯರಿಂದ ತಲಾ 10 ಕೋಟಿ ಡಿಮ್ಯಾಂಡ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗುದ್ದುಗೆ ಏರಲು ಇದೀಗ ಕುದುರೆ ವ್ಯಾಪಾರ ಆರಂಭವಾಗಿದ್ದು,...
ಹಣಕ್ಕೆ ಬೇಡಿಕೆಯಿಟ್ಟ ಬಿಬಿಎಂಪಿ ಸದಸ್ಯರು
ಹಣಕ್ಕೆ ಬೇಡಿಕೆಯಿಟ್ಟ ಬಿಬಿಎಂಪಿ ಸದಸ್ಯರು
Updated on: 

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗುದ್ದುಗೆ ಏರಲು ಇದೀಗ ಕುದುರೆ ವ್ಯಾಪಾರ ಆರಂಭವಾಗಿದ್ದು, ಮಹಾನಗರ ಪಾಲಿಕೆಗೆ ಆಯ್ಕೆಯಾದ ಮೂವರು ನೂತನ ಪಕ್ಷೇತರ ಸದಸ್ಯರು ತಲಾ 10 ಕೋಟಿ ರುಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಕೇರಳದ ಅಲೆಪ್ಪಿಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿರುವ ಆರು ಪಕ್ಷೇತರ ಸದಸ್ಯರ ಪೈಕಿ ಮೂವರು ಸದಸ್ಯರು, ನಿಮಗೆ ನಾವು ಬೆಂಬಲ ನೀಡಬೇಕಿದ್ದರೆ ತಲಾ 10 ಕೋಟಿ ರುಪಾಯಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಎಂಬ ಬೇಡಿಕೆಯನ್ನು ಬಿಜೆಪಿಯ ಮುಂದಿಟ್ಟಾರೆ ಎನ್ನಲಾಗಿದೆ.

ಬಿಜೆಪಿ ನಾಯಕ ಆರ್. ಅಶೋಕ್ ಅವರು, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪಕ್ಷೇತರರಿಗೆ ತಲಾ ಹತ್ತು ಕೋಟಿ ರುಪಾಯಿ ಹಣ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕೋನೆನ ಅಗ್ರಹಾರ ವಾರ್ಡ್ ಸದಸ್ಯ ಚಂದ್ರಪ್ಪರೆಡ್ಡಿ, ಸಗಾಯ್‌ಪುರ ಕಾರ್ಪೊರೇಟರ್ ಏಳುಮಲೈ ಹಾಗೂ ಹೊಯ್ಸಳನಗರ ವಾರ್ಡ್ ಸದಸ್ಯ ಆನಂದ್ ಕುಮಾರ್ ಹಣಕ್ಕೆ ಬೇಡಿಕೆಯಿಟ್ಟ ಪಕ್ಷೇತರ ಸದಸ್ಯರು ಎಂದು ಬಿಜೆಪಿ ದೂರಿದೆ.

ಕೆ.ಆರ್.ಪುರಂ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಉಸ್ತುವಾರಿಯಲ್ಲಿ, ಕೆಂಪಾಪುರ ಅಗ್ರಹಾರ ವಾರ್ಡ್ ಸದಸ್ಯೆ ಎಂ.ಗಾಯತ್ರಿ, ಮಾರತ್‌ಹಳ್ಳಿ ವಾರ್ಡ್ ಸದಸ್ಯ ಎಸ್.ರಮೇಶ್ ಹಾಗೂ ಸಿದ್ದಾಪುರ ವಾರ್ಡ್ ಸದಸ್ಯ ಮುಜಾಹಿದ್ ಪಾಷಾ ಸೇರಿದಂತೆ ಈ ಎಲ್ಲಾ ಆರು ಪಕ್ಷೇತರ ಸದಸ್ಯರು ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com