ಬೆಂಗಳೂರು: ಮೈಸೂರು ಪೇಪರ್ ಮಿಲ್ (ಎಂಸಿಎಂ) ಹೋರಾಟದ ಬಿಸಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‍ಗೂ ತಟ್ಟಿದೆ. ಸಂಸ್ಥೆಯ ವಿರುದ್ಧ ಚಟುವಟಿಕೆ ನಡೆಸಿರುವುದಕ್ಕಾಗಿ ಶೆಟ್ಟರ್ ಪಿಎ (ಆಪ್ತ ಕಾರ್ಯದರ್ಶಿ) ಜಗನ್ನಾಥ್ ಬಂಗೇರಗೆ ನೋಟೀಸ್ ಜಾರಿಗೊಳಿಸಲಾಗಿದೆ. ಬಂಗೇರ ಮೂಲತಃ ಮೈಸೂರು ಪೇಪರ್ ಮಿಲ್ ಸಂಸ್ಥೆಯ ಸಂಪರ್ಕಾಧಿಕಾರಿ. ಆದರೆ, ಅವರು ಕಳೆದ 10 ವರ್ಷಗಳಿಂದ ಎರವಲು ಸೇವೆ ಮೇರೆಗೆ ಸರ್ಕಾರದ ಮಂತ್ರಿಗಳುಮತ್ತು ಪ್ರಮುಖ ರಾಜಕೀಯ ನಾಯಕರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಅದೇ ರೀತಿ ಈಗ ಜಗದೀಶ್ ಶೆಟ್ಟರ್ ಪಿ.ಎ. ಆಗಿದ್ದು ಅವರ ಆಪ್ತ ಕಾರ್ಯಕ್ರಮಗಳನ್ನು ಮಾತ್ರ ನಿರ್ವಹಿಸಬೇಕು. ಆದರೆ ಬಂಗೇರ ಅವರು ಎಂಪಿಎಂ ಹೋರಾಟದಲ್ಲಿ ಭಾಗಿಯಾಗಿದ್ದರಲ್ಲದೆ, ಆಡಳಿತ ಸಂಸ್ಥೆ ವಿರುದ್ಧ ಹೇಳಿಕೆಯನ್ನೂ ನೀಡಿದ್ದಾರೆ. ಹಾಗೆಯೇ ಮುಷ್ಕರಕ್ಕೂ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿ ದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ