
ಬೆಂಗಳೂರು: ಸಚಿವ ಅಂಬರೀಷ್ ಮತ್ತು ಮಾಜಿ ಸಂಸದ ಎಚ್.ವಿಶ್ವನಾಥ್ ಸೇರಿದಂತೆ ಯಾರಲ್ಲೂ ಭಿನ್ನಮತ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ಆಗಮಿಸುವ ಸಂದರ್ಭದಲ್ಲಿ ಅಂಬರೀಷ್-ವಿಶ್ವನಾಥ್ ಮಾತಿನ ಚಕಮಕಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ವಿಶ್ವನಾಥ್ ಸಾಮಾನ್ಯವಾಗಿ ಹೆಚ್ಚು ಜೋಕ್ಸ್ ಮಾಡ್ತಾರೆ. ಅಂಬರೀಷ್ ಒಬ್ಬ ಉತ್ತಮ ನಟ. ಹೀಗಾಗಿ ಅದೇ ಸ್ಟೈಲ್‍ನಲ್ಲಿ ಉತ್ತರಿಸಿರಬೇಕು. ಇದನ್ನು ಬಿಟ್ಟರೆ ಅವರಿಬ್ಬರ ಮಧ್ಯೆಯಾಗಲೀ, ಪಕ್ಷದಲ್ಲಾಗಲಿ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದರು.
ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಸದ್ಯದಲ್ಲೇ ಜಂಟಿ ಅಧಿವೇಶನ ಆರಂಭವಾಗುತ್ತದೆ. ಅಧಿವೇಶನ ಸಂದರ್ಭದಲ್ಲಿ ಯಾರಾದರೂ ಸಂಪುಟ ವಿಸ್ತರಣೆ ಮಾಡುತ್ತಾರೆಯೇ? ಅಧಿ ವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡಬಹುದು. ಆದರೆ ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು.
ಪಕ್ಷ ಬಲವರ್ಧನೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾ ಮತ್ತು ಕಂದಾಯ ವಿಭಾಗವಾರು ಸಮಾವೇಶ ನಡೆಸಲಾಗುತ್ತಿದೆ. ನಿಗಮ ಮಂಡಳಿಗೆ ನಿರ್ದೇಶಕರ ನೇಮಕವನ್ನು ಆದಷ್ಟು ಬೇಗ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ದಿಗ್ವಿಜಯ್ ಸಿಂಗ್ ಸೂಚನೆ ನೀಡಿದ್ದು, ಶೀಘ್ರವೇ ನೇಮಿಸಲಾಗುವುದು ಎಂದರು.
Advertisement