

ವಿಧಾನಸಭೆ: ರಾಜ್ಯದಲ್ಲಿ ಎಲ್ಲ ಬಗೆಯ ಲಾಟರಿಗಳನ್ನು ರದ್ದುಪಡಿಸಿ, ರಾಜ್ಯವನ್ನು ಲಾಟರಿಮುಕ್ತ ವಲಯವನ್ನಾಗಿ ಘೋಷಿಸಲಾಗಿದೆ. ಮತ್ತೆ ಲಾಟರಿ ಜಾರಿಗೆ ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಲಾಟರಿಯಿಂದ ಬರುವ ಆದಾಯಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುವುದು ಸರ್ಕಾರಕ್ಕೆ ಅರಿವಿದೆ. ಲಾಟರಿ ನಿಷೇಧದ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. 2007ರ ಏಪ್ರಿಲ್ 1ರಿಂದ ಎಲ್ಲ ಬಗೆಯ ಲಾಟರಿಯನ್ನು ರದ್ದುಗೊಳಿಸಲಾಗಿದೆ.
ಯೋಜನಾ ಆಯೋಗದಿಂದಲೂ ಯಾವುದೇ ರೀತಿಯ ಲಾಟರಿ ಆರಂಭಕ್ಕೆ ಶಿಫಾರಸ್ಸು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ಮರಾಮಯ್ಯ ಅವರು ಡಾ.ಕೆ ಸುಧಾಕರ್ ಪ್ರಶ್ನೆಗೆ ಉತ್ತರ ನೀಡಿದರು.