

ವಿಧಾನಸಭೆ: ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಮತದಾನ ಹಕ್ಕನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಲ್ಲದೇ ಮತ್ತೊಂದು ಪ್ರಮುಖ ತಿದ್ದುಪಡಿಯಲ್ಲಿಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ಏರಿಸುವ ವಿಧೇಯಕವನ್ನು ಮಂಡಿಸಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದಂತೆ, ಪಂಚಾಯತ್ ಚುನಾ ವಣೆಗಳಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕು ಚಲಾಯಿಸಲೇಬೇಕು. ಒಂದೊಮ್ಮೆ ಅಭ್ಯರ್ಥಿಗಳು ಇಷ್ಟವಾಗದಿದ್ದರೆ `ನೋಟಾ' ಕೂಡ ಚಲಾಯಿಸಬಹುದಾಗಿದೆ. ಈ ಸಂಬಂಧದ ತಿದ್ದುಪಡಿ ವಿಧೇಯಕವು ಸೋಮವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಅಧಿವೇಶನದ ಕೊನೆಯ ದಿನವಾದ ಮಂಗಳವಾರ ಚರ್ಚೆಗೆ ಬರುವ ಸಾಧ್ಯತೆಯಿದ್ದು, ಮುಂದಿನ ಪಂಚಾಯತ್ ಚುನಾವಣೆಯಲ್ಲಿಯೇ ಇದು ಅನುಷ್ಠಾನಕ್ಕೆ ಬರಲಿದೆ. ಕಡ್ಡಾಯ ಮತದಾನ ಹಾಗೂ ನೋಟಾ ಚಲಾವಣೆ ಬಗ್ಗೆ ಚುನಾವಣಾಧಿಕಾರಿಗಳು ಸೂಕ್ತ ವ್ಯವಸ್ಥೆಮಾಡಬೇಕಿದೆ.
ಭಾರಿ ಬದಲಾವಣೆ ಸಾಧ್ಯತೆ
ಶಾಸಕ ರಮೇಶ್‍ಕುಮಾರ್ ನೇತೃತ್ವದ ಸಮಿತಿ ಶಿಫಾರಸಿನಂತೆ ರಾಜ್ಯ ಸರ್ಕಾರವು ಈ ತಿದ್ದುಪಡಿಗೆ ಮುಂದಾಗಿದ್ದು, ಪಂಚಾಯತ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗೆ ಕಾರಣ
ವಾಗಲಿದೆ. ಪಂಚಾಯತ್ ವ್ಯವಸ್ಥೆ ಜಾರಿಯಾದ ಬಳಿಕ ಆಗುತ್ತಿರುವ ಪ್ರಮುಖ ತಿದ್ದುಪಡಿ ಇದಾಗಿದೆ. ರಮೇಶ್‍ಕುಮಾರ್ ನೀಡಿದ್ದ ಶಿಫಾರಸುಗಳಲ್ಲಿ ಕೆಲ ಅಂಶಗಳನ್ನು ಮಾತ್ರ
ಪರಿಗಣಿಸಲಾಗಿದೆ. ಇದರಲ್ಲಿ ಮತದಾನ, ಅಧ್ಯಕ್ಷರ ಅವಧಿಯು ಪ್ರಮುಖವಾಗಿದೆ.
ಅಧ್ಯಕ್ಷರ ನೇರ ಚುನಾವಣೆ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದರೂ ಸರ್ಕಾರ ಆ ಪ್ರಯೋಗಕ್ಕೆ ಮುಂದಾಗಲಿಲ್ಲ. ಬದಲಾಗಿ ಅಧಿಕಾರ ಅವಧಿಯನ್ನು ಮಾತ್ರ ಸಂಪೂರ್ಣ
5 ವರ್ಷ ನೀಡಲು ಮುಂದಾಗಿದೆ. ಈ ಹಿನ್ನೆಲೆ ಯಲ್ಲಿ ಈ ತಿದ್ದುಪಡಿ ಅಂಗೀ ಕಾರವಾದರೆ ಪಂಚಾಯತ್ ವ್ಯವಸ್ಥೆಯಲ್ಲಿ ಮೀಸಲು ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸಲಿವೆ.
ಒಂದು ಅವ„ಗೆ ಒಬ್ಬ ಜನಪ್ರತಿನಿಧಿ ಅಧ್ಯಕ್ಷ ಹಾಗೂ ಉಪಾ ಧ್ಯಕ್ಷರಾಗಲಿದ್ದಾರೆ. ಹಾಗೆಯೇ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಪ್ರತಿನಿಧಿಗಳು ಎಂದು ಇರುವಲ್ಲಿ ಒಟ್ಟು ಸಂಖ್ಯೆಯ ಅರ್ಧಕ್ಕಿಂತ ಒಂದು ಹೆಚ್ಚು ಎಂದು ತಿದ್ದುಪಡಿಗೆ ಪ್ರಸ್ತಾವನೆ ಬಂದಿದೆ. ಹಾಗೆಯೇ ಮುಂದಿನ 10 ವರ್ಷಗಳ ಅವಧಿಗೆ ಮೀಸಲು ಪರಿವರ್ತನೆ
ಕೂಡ ಮುಂದುವರೆಯಲಿದೆ.