

ಸಿದ್ದಾಪುರ (ಕುಂದಾಪುರ, ಉಡುಪಿ): ಕಾಂಗ್ರೆಸ್ ಸರ್ಕಾರ ಗ್ರಾಪಂ ಚುನಾವಣೆಗಳನ್ನು ಮುಂದೂಡುವ ಹುನ್ನಾರ ನಡೆಸಿಲ್ಲ. ಆದರೆ, ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಅದು ಆಗಬೇಕಾದ ಅವಧಿ ಯಲ್ಲಿಯೇ ಮಾಡುತ್ತೇವೆ. ನಾವು ಚುನಾವಣೆಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸೋಮವಾರ ವಾರಾಹಿ ನದಿ ನೀರಾವರಿ ಯೋಜನೆಯ ಮೊದಲ ಹಂತವನ್ನು ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಉದ್ಘಾಟಿಸಿ ಮಾ ತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಬದಲು, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಸೌಲಭ್ಯಗಳನ್ನು ತರಿಸಿಕೊಡಲು ಪ್ರಯತ್ನಿಸಬೇಕು. ಪಶ್ಚಿಮಘಟ್ಟ ಸಂರಕ್ಷಣೆಯ ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ಅವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಗೆ ಜನರ ವಿರೋಧವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಜನವಿರೋಧಿ ವರದಿಜಾರಿಯಾಗದಂತೆ ಸಂಸದೆ ಶೋಭಾ ಅವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ವಾರಾಹಿ ನದಿ ನೀರಾವರಿಗೆ ಸಹಾಯ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ. ಸಂಸದೆ ಅವರು ಈ ಸಹಾಯ ಸಿಗುವಂತೆ ಮಾಡಬೇಕು ಎಂದರು.
15,000 ಹೆಕ್ಟೇರ್‍ಗೆ ನೀರು 35 ವರ್ಷಗಳ ಹಿಂದೆ ಆರಂಭವಾದ ವಾರಾಹಿ ನೀರಾವರಿ ಯೋಜನೆ ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳಿಸಿ 15,000 ಹೆಕ್ಟೇರ್ ಕೃಷಿ ಭೂಮಿಗೆ
ನೀರೊದಗಿಸಲಾಗುವುದು. ಈ ಬಗ್ಗೆ ಜಿಲ್ಲೆಯ ಯ ರೈತರಿಗೆ ಯಾವುದೇ ಆತಂಕ ಬೇಡ. 1989ರಲ್ಲಿ ಕೇವಲ ರು. 9.45 ಕೋಟಿ ಯೋಜನಾ ವೆಚ್ಚದಲ್ಲಿ ಆರಂಭಗೊಂಡ
ವಾರಾಹಿ ನದಿ ನೀರಾವರಿ ಯೋ ಜನೆ, 35 ವರ್ಷ ಕಳೆದರೂ, ರು. 570 ಕೋಟಿ ವೆಚ್ಚವಾಗಿದ್ದರೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಶೇ. 60ರಷ್ಟು ಕಾಮಗಾರಿಗಳನ್ನು ನಡೆಸಿ ಮೊದಲ ಹಂತ ಯೋಜನೆ ಪೂರ್ಣಗೊಳಿಸಲಾಗಿ ದೆ. ಇದರಿಂದ 6,000 ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಯಲಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ, ಶಾಸಕರ ಹೆಸರಿದ್ದರೂ ಅವರು ಭಾಗವಹಿಸಿರಲಿಲ್ಲ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷದವರಿಗೆ ಇಂತಹ ಜನಕಲ್ಯಾಣ ಕಾರ್ಯ ಕ್ರಮಗಳಲ್ಲಿ ಆಸಕ್ತಿ ಇಲ್ಲ. 35 ವರ್ಷಗಳ ಕಾಲ ಕನಸಾಗಿದ್ದ ಯೋ ಜನೆ ಸಾಕಾರಗೊಂಡ ಈ ದಿನ ಉಡುಪಿ ಜಿಲ್ಲೆಯ ಪಾಲಿಗೆ ಸುವರ್ಣಾ ಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಆದರೂ, ಇಂತಹ ಸಂಭ್ರಮದಲ್ಲಿ ವಿಪಕ್ಷದವರು ಭಾಗವಹಿಸಿಲ್ಲ. ಅವರಿಗೆ ಆಕ್ಷೇಪಗಳಿದ್ದರೆ ಇದೇ ವೇದಿಕೆಯಲ್ಲಿಯೇ ಹೇಳ ಬೇಕಾಗಿತ್ತು. ನಾವು ತಕ್ಕ ಉತ್ತರ ಇಲ್ಲಿಯೇ ಕೊಡುತ್ತಿದ್ದವು ಎಂದರು. 11 ಗಂಟೆಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬರುವಾಗ 1 ಗಂಟೆಯಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಬಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ಕಾದು ನಂತರ ಹಿಂತೆರಳಿದ್ದರು.