ಕನ್ನಡಕ ಹಾಕಿಕೊಂಡು ನಮ್ಮ ಸಾಧನೆ ನೋಡಿ: ಸಿದ್ದರಾಮಯ್ಯ

ನೀವು ಅಧಿಕಾರ ಬಿಟ್ಟು ಹೋಗುವಾಗ ಭ್ರಷ್ಟ ವ್ಯವಸ್ಥೆಯನ್ನು ಬಳುವಳಿ ನೀಡಿ ಹೋಗಿದ್ದೀರಿ. ಆದರೆ, ನಿಮಗೆ ನಮ್ಮ ಸಾಧನೆ ಕಾಣುತ್ತಿಲ್ಲ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on: 

ದಾವಣಗೆರೆ: ನೀವು ಅಧಿಕಾರ ಬಿಟ್ಟು ಹೋಗುವಾಗ ಭ್ರಷ್ಟ ವ್ಯವಸ್ಥೆಯನ್ನು ಬಳುವಳಿ ನೀಡಿ ಹೋಗಿದ್ದೀರಿ. ಆದರೆ, ನಿಮಗೆ ನಮ್ಮ ಸಾಧನೆ ಕಾಣುತ್ತಿಲ್ಲ.

ಸರಿಯಾದ ಕನ್ನಡಕವನ್ನು ಹಾಕಿಕೊಂಡು ನೋಡಿ. ನಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಭೂಗಳ್ಳರು, ದರೋಡೆಕೋರರು ಹಾಗೂ ಕಳ್ಳರ ಬಳಿಹೋಗಿಕೇಳಬೇಡಿ. ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ ಯೋಜನೆಯ ಫಲಾನುಭವಿಗಳನ್ನು ಕೇಳಿ. ಕುಮಾರಸ್ವಾಮಿ ಮತ್ತು ನಿಮ್ಮ ಕಾಲದಲ್ಲಿ ಇದನ್ನು ಮಾಡಲು ಏಕೆ ಸಾಧ್ಯವಾಗಲಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನನ್ನ ಸರ್ಕಾರ ಹಳ್ಳಿ ಪರ, ಅಹಿಂದ ಪರ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ನಾನು ರೈತ ಪರ, ಅಹಿಂದ ಪರ, ಬಡವರ ಪರ, ಮಹಿಳಾ ಪರ. ಆದರೆ, ನಿಮಗೆ ಇದ್ಯಾವುದನ್ನು ಸಹಿಸಿ- ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಮಗೆ ಹೊಟ್ಟೆ ಕಿಚ್ಚು. ಆದರೂ `ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ'ವಾಗಿಸುವ ಕನಸು ಕಾಣುತ್ತಿದ್ದೀರಿ. ನಾನು ಈ ವೇದಿಕೆ ಮೂಲಕ ಘಂಟಾಘೋಷವಾಗಿ ಹೇಳುತ್ತೇನೆ. `ಕರ್ನಾಟಕವನ್ನು ಬಿಜೆಪಿ ಮತ್ತು ಕೋಮುವಾದಿ ಮುಕ್ತ'ವಾಗಿಸುತ್ತೇನೆ. ಯಾವ ಕಾರಣಕ್ಕೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಈ ಹಿಂದೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ ಮತ್ತೆ ಹೇಳುತ್ತೇನೆ. 2018ರ ಚುನಾವಣೆಗೆ ಮತ್ತೆ ಸ್ಪರ್ಧಿಸುತ್ತೇನೆ.ಕಾಂಗ್ರೆಸ್‍ನ್ನು ಇನ್ನೊಂದು ಬಾರಿ ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ, ಕಪ್ಪು ಹಣ ವಾಪಸ್, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ರದ್ದು, ಸಮಾನ ನಾಗರಿಕ ಸಂಹಿತೆ ಸೇರಿದಂತೆ ಸಾಲು ಸಾಲು ಭರವಸೆ ನೀವು ನೀಡಿದ್ದೀರಿ. ಆದರೆ, ಆ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಹೀಗಾಗಿ ನಿಮಗೆ ನಮ್ಮನ್ನು ಟೀಕಿಸುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ನೀವು ಮಾಡಬಾರದ್ದನ್ನು ಮಾಡಿದಿರಿ. ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿದ್ದರು.

ನಿಮ್ಮ ಸಂಪುಟದ 13 ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ ಇತ್ತು. ನಿಮ್ಮ ಸಚಿವರೊಬ್ಬರು ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದರು. ವಿಧಾನಸಭೆ ಕಲಾಪ ನಡೆಯುವಾಗ ಮೂವರು ಸಚಿವರು ಬ್ಲೂಫಿಲ್ಮ್ ನೋಡಿ ಸಿಕ್ಕಿಬಿದ್ದರು. ಇಷ್ಟೆಲ್ಲ ಅವಾಂತರ ಸೃಷ್ಟಿಸಿದ ನಿಮಗೆ ನಮ್ಮ ಬಗ್ಗೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ? ನಿಮಗೆ ಮಾನ- ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ಟಾಂಗ್
ನಾವು ಅಧಿಕಾರಕ್ಕೆ ಬರದೇ ಇದ್ದರೂ ನಿಮ್ಮನ್ನು ಸೋಲಿಸುತ್ತೇವೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಅಧಿಕಾರಕ್ಕೆಬರುವುದು ಸಾಧ್ಯವೇ ಇಲ್ಲ. ನಿಮಗೆ ಈಗಿರುವ ಸ್ಥಾನವೇ ಗ್ಯಾರಂಟಿ. ಅವರು ಮುಖ್ಯಮಂತ್ರಿಯಾಗಿದ್ದಾಗ ಹಳ್ಳಿ ವಾಸ್ತವ್ಯ ಮಾಡುತ್ತಿದ್ದರು. 2 ಗಂಟೆಗೆ ಹಳ್ಳಿಗೆ ಹೋಗಿ 5 ಗಂಟೆಗೆ ಜಾಗ ಖಾಲಿ ಮಾಡುತ್ತಿದ್ದ ರೀತಿಯನ್ನು
ಜನ ಇನ್ನೂ ಮರೆತಿಲ್ಲ ಎಂದರು.

ನ್ಯಾಯ ವಿರೋಧಿಗಳ ಸೋಲಿಸಿ ಗ್ರಾಪಂ ಚುನಾವಣೆ ಸಮೀಪಿಸುತ್ತಿದೆ. ಇದು ಪಕ್ಷಾತೀತ ಚುನಾವಣೆ. ಆದರೆ, ಕಾಂಗ್ರೆಸ್ ಅಧಿಕಾರ ವಿಕೇಂದ್ರೀ ಕರಣ ಸಿದಾಟಛಿಂತದಲ್ಲಿ ನಂಬಿಕೆ
ಇಟ್ಟುಕೊಂಡಿದೆ. ಮಹಿಳೆಯರಿಗೆ ಶೇ.50ರಷ್ಟು ಮೀಸಲು ನೀಡುತ್ತಿದೆ. ಆದರೆ, ಬಿಜೆಪಿಯವರು ಮೀಸಲು ಮತ್ತು ಸಾಮಾಜಿಕ ನ್ಯಾಯದ ವಿರೋಧಿಗಳು. ಹಿಂದೆ ಬಿಜೆಪಿಯ ಆಸ್ಥಾನ
ಪುರೋಹಿತರಾದ ನ್ಯಾ. ರಾಮಾ ಜೋಯಿಸ್ ಮೀಸಲು ನೀತಿ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇಂಥ ಸಾಮಾಜಿಕ ನ್ಯಾಯ ಮತ್ತು ಮೀಸಲು ವಿರೋಧಿ ಧೋರಣೆಯ ಬಿಜೆಪಿ ಬೆಂಬಲಿಗರು, ಅಭಿಮಾನಿಗಳು ಯಾರೇ ಚುನಾವಣೆಗೆನಿಂತರೂ ಪಂಚಾಯ್ತಿ ಚುನಾವಣೆಯಲ್ಲಿ ಸೋಲಿಸಬೇಕು ಎಂದರು.

ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಉಮೇಶ್ ಕತ್ತಿಯಂಥವರು ಬೊಬ್ಬೆ ಹೊಡೆಯುತ್ತಿದ್ದಾರೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಈ ಬಗ್ಗೆ ನೀವ್ಯಾಕೆ ಚಕಾರ ಎತ್ತಲಿಲ್ಲ? ನಂಜುಂಡಪ್ಪ ವರದಿ ಅನುಷ್ಠಾನಕ್ಕಾಗಿ ರು.2300 ಕೋಟಿ ಕೊಡುವುದಾಗಿ ನಾವು ಬೆಳಗಾವಿ ಅಧಿವೇಶನದಲ್ಲಿಘೋಷಿಸಿದ್ದೇವೆ. ಆದರೆಆಡ್ವಾಣಿ ಉಪಪ್ರಧಾನಿಯಾಗಿದ್ದಾಗ ಹೈದರಾ ಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದಿದ್ದರು. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರಂಥವರ ಹೋರಾಟದ ಫಲವಾಗಿ ಕೇದ್ರದ ಯುಪಿಎ ಸರ್ಕಾರ 371 ಜೆ ಅನುಷ್ಠಾನಗೊಳಿಸಿದೆ ಎಂದರು.

ಒಂದು ವರ್ಷದ ನಿಮ್ಮ ಸಾಧನೆ ಪಟ್ಟಿ ಕೊಡಿ
`ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಪಟ್ಟಿ ನಾವು ಕೊಡುತ್ತೇವೆ. ನಿಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಪಟ್ಟಿ ನೀವು ಕೊಡಲು ಸಿದ್ಧರಿದ್ದೀರಾ? ಹಾಗಿದ್ದರೆ ನಿಮ್ಮ ಸಾಧನೆ ಪಟ್ಟಿ ಕೊಡಿ...'  

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ, ಸರ್ಕಾರವೇ ಕಾಣುತ್ತಿಲ್ಲ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಾಕಿದ ಸವಾಲು ಇದು. ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಹಮ್ಮಿ ಕೊಂಡಿದ್ದ `ಸರ್ವೋದಯ ಸಮಾವೇಶ'ದಲ್ಲಿ ಮಾತನಾಡಿ,`ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಆದರೆ, ಪ್ರತಿಪಕ್ಷಗಳಿಗೆ ಅದೆಲ್ಲವೂ ಕಾಣತ್ತಿಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ರೈತರ ಸಾಲ ಮನ್ನಾ, ಪರಿಶಿಷ್ಟರು, ಅಲ್ಪಸಂಖ್ಯಾತರು, ಬಡವರು ಹೀಗೆ ಎಲ್ಲಾ ವರ್ಗದವರಿಗೂ ನೂರಾರು ಕಾರ್ಯಕ್ರಮ ನಮಗೆ ಕಂಡರೂ, ನಿಮಗೆ ಕಾಣುತ್ತಿಲ್ಲವೆ?' ಎಂದು ತರಾಟೆಗೆ ತೆಗೆದುಕೊಂಡರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com