ತಮಿಳುನಾಡು ಉಪಚುನಾವಣೆ: ಆರ್.ಕೆ ನಗರ ದಿಂದ ಜಯಲಲಿತಾ ಸ್ಪರ್ಧೆ

ಎಲ್ಲರ ನಿರೀಕ್ಷೆಯಂತೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರದಾನ ಕಾರ್ಯದರ್ಶಿ ಜಯಲಲಿತಾ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಜಯಲಲಿತಾ
ಜಯಲಲಿತಾ
Updated on: 

ಚೆನ್ನೈ: ಎಲ್ಲರ ನಿರೀಕ್ಷೆಯಂತೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರದಾನ ಕಾರ್ಯದರ್ಶಿ ಜಯಲಲಿತಾ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅಧಿೃಕೃತವಾಗಿ ಘೋಷಿಸಲಾಗಿದೆ.

ಜೂನ್ 27 ರಂದು ನೆಯುವ ಉಪ ಚುನಾವಣೆಗೆ ಆರ್.ಕೆ ನಗರದಿಂದ ಸ್ಪರ್ಧಿಸಲು ಇಂದು ನಡೆದ ಎಐಎಡಿಎಂಕೆ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮೇ 26 ರಂದು ಉಪ ಚುನಾವಣೆಗೆ, ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ ನಂತರ ಆರ್.ಕೆ ನಗರ ಶಾಸಕ ಪಿ. ವಟ್ರಿವೇಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜಯಲಲಿತಾಗೆ ತಮ್ಮ ವಿಧಾನ ಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ಡಿಎಂಕೆ, ಪಿಎಂಕೆ, ಮತ್ತು ವಿಸಿಕೆ ಪಕ್ಷಗಳು ಈಗಾಗಲೇ ಬೇರೆ ಬೇರೆ ಕಾರಣಗಳನ್ನು ನೀಡಿ ಉಪ ಚುನಾವಣೆಯಿಂದ ಹಿಂದೆ ಸರಿದಿವೆ. ಇನ್ನು ಬಿಜೆಪಿ, ಡಿಎಂಡಿಕೆ, ಸಿಪಿಎಂ, ಮತ್ತು ಸಿಪಿಐ ಪಕ್ಷಗಳು ತಮ್ಮ ನಿಲುವನ್ನು ತಿಳಿಸಬೇಕಾಗಿದೆ.

ಜೂನ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್ 11 ಮತ್ತು 12 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜೂನ್ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com