ವಿಧಾನಸೌಧದಲ್ಲಿ ಟಿಪ್ಪು ಜಯಂತಿ ತಪ್ಪು: ಎಚ್.ಡಿ. ದೇವೇಗೌಡ

ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸಿದ್ದು ತಪ್ಪು. ಇದು ಖಂಡನೀಯ ಎಂದು ಮಾಜಿ ಪ್ರಧಾನಿ...
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
Updated on: 

ಬೆಂಗಳೂರು: ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸಿದ್ದು ತಪ್ಪು. ಇದು ಖಂಡನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು. 

ರಾಜಕೀಯ ಪಕ್ಷಗಳು ಸೌಹಾರ್ದಯುತ ವಿಷಯಗಳಿಗೆ ಒತ್ತು ನೀಡಬೇಕೇ ವಿನಃ ಇಂತಹ ವಿಷಯಗಳಿಗಲ್ಲ. ಟಿಪ್ಪು ಜಯಂತಿ ಸಂಬಂಧ ಹಿಂದೂ ಮುಸ್ಲಿಮರಲ್ಲಿ ಕೋಮು ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. 
ಟಿಪ್ಪು ಸುಲ್ತಾನ್ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ ನೀಡಿದ ಹೇಳಿಕೆಯಿಂದ ರಾಜ್ಯಾದ್ಯಂತ ಹೋರಾಟ ಶುರುವಾಗಿದೆ. ಅನಗತ್ಯವಾಗಿ ಹೋರಾಟ ಮುಂದುವರಿಸದೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟರೆ ಉತ್ತಮ ಎಂದರು.
ರಾಜ್ಯಾದ್ಯಂತ ಬಿಜೆಪಿ ಹೋರಾಟ ಪ್ರಾರಂಭಿಸಿರುವ ಕಾರಣ ಹಾಸನದಲ್ಲಿ ನಡೆಯುತ್ತಿರುವ ಹಾಸನಾಂಬ ಜಾತ್ರೆಗೆ ದೊಡ್ಡ ಪ್ರಮಾಣದಲ್ಲಿ ಅಡ್ಡಿಯಾಗಿದೆ. ಜಾತ್ರೆಗೆ ನೆರೆ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಒಂದೆಡೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದರೆ, ಮತ್ತೊಂದೆಡೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಮತ್ತು ರಸ್ತೆ ತಡೆಯಿಂದ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. 
ಬಿಹಾರದ ಪರಿಸ್ಥಿತಿ ದೇಶಾದ್ಯಂತ ಜನರಿಗೆ ತಿಳಿದಿದೆ. ಅದನ್ನು ವಿವಿಧ ಸಂಘಟನೆಗಳಿಂದ ಮರೆಮಾಚಲು ಸಾಧ್ಯವಿಲ್ಲ. ಇದನ್ನು ತಿಳಿದು ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳ ಟಿಪ್ಪು ಜಯಂತಿ ಸಂಬಂಧ ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದೆ ಹೋರಾಟವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com