ಡಿಸೆಂಬರ್‍ನಲ್ಲಿ ವೈದ್ಯರ ನೇಮಕ :ಖಾದರ್

ವೈದ್ಯರ ನೇಮಕಾತಿಗೆ ಇದ್ದ ಅಡೆತಡೆಗಳನ್ನು ಪರಿಹರಿಸಿರುವ ಕಾರಣ ಸದ್ಯದಲ್ಲೇ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಸಚಿವ ಖಾದರ್ ಹೇಳಿದರು.....
ಯು.ಟಿ. ಖಾದರ್
ಯು.ಟಿ. ಖಾದರ್
Updated on: 

ವಿಧಾನ ಸಭೆ: ವೈದ್ಯರ ನೇಮಕಾತಿಗೆ ಇದ್ದ ಅಡೆತಡೆಗಳನ್ನು ಪರಿಹರಿಸಿರುವ ಕಾರಣ ಸದ್ಯದಲ್ಲೇ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಸಚಿವ ಖಾದರ್ ಹೇಳಿದರು. ಸದಸ್ಯ ಮಹಾಂತೇಶ ಕೌಜಲಗಿ ಪ್ರಶ್ನೆಗೆ ಉತ್ತರಿಸಿದ ಅವರು, 483 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು- ಜಿಲ್ಲಾ ಆಸ್ಪತ್ರೆಗಳಲ್ಲಿ 1330 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ.

ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ 299 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ 208 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಇವುಗಳನ್ನು ತುಂಬುವ ಪ್ರಕ್ರಿಯೆ ನಡೆದಿದೆ ಎಂದರು. ಕೆಪಿಎಸ್‍ಸಿ 9 ತಜ್ಞತೆಗಳ 749 ಹುದ್ದೆಗಳ ಪೈಕಿ 574 ಹುದ್ದೆಗಳಿಗೆ ಆಯ್ಕೆ ಪಟ್ಟಿ ಕಳುಹಿಸಿದೆ.

ಮಾಸಾಂತ್ಯದೊಳಗೆ ಅಂತಿಮ ಆಯ್ಕೆ ಪಟ್ಟಿ ಕಳುಹಿಸುವುದಾಗಿ ಕೆಪಿಎಸ್ಸಿ ತಿಳಿಸಿದೆ. ಬಳಿಕ ನಿಯಮಾನುಸಾರ ಮುಂದಿನ ತಿಂಗಳ ಅಂತ್ಯದೊಳಗೆ ವೈದ್ಯರ ಹಾಗೂ ತಜ್ಞರ ನೇಮಕಾತಿ ಪೂರ್ಣಗೊಳಿಸಲಾಗುವುದೆಂದು ಖಾದರ್ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com