ರಾಜಕೀಯ

ಗೈರಾದವರಿಗೆ ರಾಹುಕಾಲ

ಹಾವೇರಿಯಲ್ಲಿ ಆಯೋಜಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿಗೆ ಸಂಪುಟದ ಹಲವು ಸಚಿವರು ಗೈರು ಹಾಜರಾಗಿರುವುದು ಹೈಕಮಾಂಡ್...

ಗೈರಾದವರಿಗೆ ರಾಹುಕಾಲ
ರಾಹುಲ್ ಗಾಂಧಿ ರ್ಯಾಲಿ (ಕೃಪೆ : ಕೆಪಿಎನ್ )
Published On :
ಬೆಂಗಳೂರು:  ಹಾವೇರಿಯಲ್ಲಿ ಆಯೋಜಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರ್ಯಾಲಿಗೆ ಸಂಪುಟದ ಹಲವು ಸಚಿವರು ಗೈರು ಹಾಜರಾಗಿರುವುದು ಹೈಕಮಾಂಡ್ ಕೋಪಕ್ಕೆ ಕಾರಣವಾಗಿದ್ದು, ಸಚಿವರ ಅನುಪಸ್ಥಿತಿ ಸಂಬಂಧ ವರದಿ ನೀಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್  ಸಿಂಗ್, ಸಿಎಂ ಸಿದ್ದರಾಮ ಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಂಸದ ಎಚ್. ವಿಶ್ವನಾಥ್ ನೀಡಿರುವ ಹೇಳಿಕೆ ಹಿಂದುಳಿದ ವರ್ಗದ ಕೆಲ ಮುಖಂಡರು ಹಾಗೂ ಸಿದ್ದರಾಮ ಯ್ಯ ಆಪ್ತವಲಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದ್ದು, ಕಾಂಗ್ರೆಸ್ ವಲಯದಲ್ಲಿ ಒಂದೇ ದಿನ ಎರಡು ವಿವಾದ ಸ್ಫೋಟವಾಗಿದೆ.
ಮೊದಲ ವಿವಾದ: ರಾಹುಲ್ ರ್ಯಾಲಿಗೆ ಎಲ್ಲ ಸಚಿವರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೆ ಸೂಚನೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷಡಾ.ಜಿ.ಪರಮೇಶ್ವರ ಅವರು ಕೂಡ ಎಲ್ಲ ಸಚಿವರಿಗೆ ಪತ್ರ ಬರೆದು ರಾಹುಲ್ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದರು.
ಆದರೆ ಉಭಯ ನಾಯಕರ ಆದೇಶವನ್ನು ಹಿರಿಯ ಸಚಿವರೇ ಉಲ್ಲಂಘಿಸಿದ್ದಾರೆ.ಹಾವೇರಿ ಕಾರ್ಯಕ್ರಮದಲ್ಲಿ ಸಚಿವರು ಕಾಣದೇ ಇರುವುದು ದಿಗ್ವಿಜಯ್ ಸಿಂಗ್ ಅವರನ್ನು ಕೆರಳಿಸಿದೆ.
ಈ ಮಧ್ಯೆ ರಾಹುಲ್ ಗಾಂಧಿ ಕಾರ್ಯಕ್ರಮ ಮೂರು ಕಡೆ ಇದ್ದುದರಿಂದ ಸಚಿವರಿಗೆ ಮೂರು ತಂಡಗಳಾಗಿ ವಿಭಜಿಸಿ ಜವಾಬ್ದಾರಿ ನೀಡಲಾಗಿತ್ತು ಎಂಬ ವಾದ ಕೇಳಿ ಬರುತ್ತಿದೆ. ಆದರೆ ಮಂಡ್ಯದ ವಿ.ಸಿ.ಫಾರಂನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾದವರು ಹಾವೇರಿಯಲ್ಲೂ ಪಾಲ್ಗೊಂಡಿದ್ದರಿಂದ ಸಚಿವರ ಈ ವಾದ ಈಗ ಅರ್ಥ ಕಳೆದುಕೊಂಡಿದೆ. ಕಾಂಗ್ರೆಸ್ ಅಧಿನಾಯಕರ ಕೋಪದಿಂದ ಪಾರಾಗುವುದಕ್ಕೆ ಈಗ ಸಚಿವರುನೀಡಿದ ಸಬೂಬುಗಳು ಟುಸ್ ಆಗಿವೆ. 
ಯಾರು ಗೈರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ವಸತಿ ಸಚಿವ ಅಂಬರೀಶ್, ಆರೋಗ್ಯ ಸಚಿವ ಯು.ಟಿ.ಖಾದರ್, ಜವಳಿ ಸಚಿವ ಬಾಬುರಾವ್ ಚಿಂಚನಸೂರ್,ಮೀನುಗಾರಕೆ ಸಚಿವ ಅಭಯಚಂದ್ರ ಜೈನ್, ಗೃಹಸಚಿವ ಕೆ.ಜೆ ಜಾರ್ಜ್, ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ, ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಹಾವೇರಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಈ ಮಧ್ಯೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಮ್ಮ ಅನುಪಸ್ಥಿತಿಗೆಸ್ಪಷ್ಟೀಕರಣ ನೀಡಿದ್ದಾರೆ. ಚಿತ್ರದುರ್ಗದ ಸರಸ್ವತಿ ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಎಚ್.ಎಲ್.ದತ್ತು ಆಗಮನ ಹಿನ್ನೆ ಲೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದತಮಗೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ಹೇಳಿಕೆ: ಈ ಮಧ್ಯೆ ವಿಶ್ವನಾಥ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರ ಸಮುದಾಯದ ಮುಖಂಡರಿಂದಲೇ ಇನ್ನಷ್ಟು ತಿರುಗೇಟು ನೀಡುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ವಿಶ್ವನಾಥ್ ಅವರ ಟೀಕೆ ಯನ್ನು ಸಿದ್ದರಾಮಯ್ಯ ಅವರೂ ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಆಪ್ತವರ್ಗದ ಜತೆ ಚರ್ಚೆ ನಡೆಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕುರುಬ ಸಮುದಾಯದಲ್ಲೇ ಭಿನ್ನಮತ ಸೃಷ್ಟಿಯಾಗಬಹುದೆಂಬಮಾತುಗಳೂ ಕೇಳಿ ಬರುತ್ತಿವೆ
ವಿಶ್ವನಾಥ್ ವಿರುದ್ಧ ಆಕ್ರೋಶ
ಸಿಎಂ ವಿರುದ್ಧ ಮಾಜಿ ಸಂಸದ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಹಿಂದುಳಿದ ವರ್ಗದ ಮುಖಂಡರಲ್ಲಿ ಅಸಮಾಧಾನ ಸೃಷ್ಟಿಸಿದ್ದು, ವಿಶ್ವನಾಥ್ ಅಸೂಯ ಪರ ಹಾಗೂ ಕಾಮಾಲೆ
ಕಣ್ಣಿನ ರಾಜಕಾರಣಿ ಎಂದು ಸಿದ್ದರಾಮಯ್ಯ ಅವರ ಆಪ್ತ ಹಾಗೂ ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಕಿಡಿಕಾರಿದ್ದಾರೆ. ವಿಶ್ವನಾಥ್ ಅವರದು ಮೊಸರಲ್ಲಿ ಕಲ್ಲು ಹುಡುಕುವ ಜಾಯಮಾನ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿರುವ ಸಿದ್ದರಾಮಯ್ಯ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಉತ್ತಮಪಡಿಸಿದ್ದಾರೆ. ಆಡಳಿತಾತ್ಮಕವಾಗಿ ಎಡವಿದ್ದರೆ ಸಿದ್ದರಾಮಯ್ಯ ಅವರಿಗೆನಿಕಟವರ್ತಿಯಾಗಿದ್ದ ವಿಶ್ವನಾಥ್ ಎಚ್ಚರಿಕೆ ನೀಡಬಹುದಿತ್ತು. ಅದನ್ನು ಬಿಟ್ಟು ಪ್ರಚಾರದ ಉದ್ದೇಶಕ್ಕಾಗಿ ಇಂಥ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ. ದೇವರಾಜ್ ಅರಸು ಅವರ ಬಗ್ಗೆಪುಂಖಾನುಪುಂಖವಾಗಿಭಾಷಣ ಮಾಡುವ ವಿಶ್ವನಾಥ್, ಈ ಹಿಂದೆ ಅರಸು ಅವರಿಗೆ ಕೈಕೊಟ್ಟು ಗುಂಡೂರಾವ್ ಅವರ ಜತೆ ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ನಿಮ್ಮ ಹೇಳಿಕೆ ಅಹಿಂದ ವರ್ಗದಲ್ಲಿ ಗೊಂದಲ ಮೂಡಿಸಬಹುದೇ ಹೊರತು ವೈಯಕ್ತಿಕವಾಗಿ ಯಾವುದೇ ಲಾಭ ತಂದುಕೊಡುವುದಿಲ್ಲ. ಅರಸು ಹಾದಿಯಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಿದ್ದಾರೆ ಎಂಬುದಕ್ಕೆ ಅವರ ಯೋಜನೆಗಳೇ ಸಾಕ್ಷಿ ಎಂದುತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.