ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡದೆ ರೈತರಿಗೆ ಭವಿಷ್ಯವಿಲ್ಲ. ಆದ್ದರಿಂದ ಸರ್ಕಾರ ಸಾಲ ಮಾಡಿಯಾದರೂ, ರೈತರ ಸಾಲ ಮನ್ನಾ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿರುವ ಅವರು, ``ಬರ ಪರಿಹಾರಕ್ಕೆ ಸಚಿವ ಕೃಷ್ಣ ಬೈರೇಗೌಡ, ರು.500 ಕೋಟಿಗಾಗಿ ಕೇಂದ್ರದಿಂದ ನೆರವು ಬೇಡಿದ್ದಾರೆ. ಅದನ್ನು ಕೇಂದ್ರ ಕೊಡುತ್ತಿಲ್ಲ. ಆದರೆ ಬಿಜೆಪಿ ನಾಯಕರು ಹಣದ ಕೊರತೆ ಎಷ್ಟಾದರೂ ಕೇಂದ್ರದಿಂದ ಕೊಡಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ರೈತ ಚೈತನ್ಯಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರನ್ನು ಜನ ಹಿಡಿದು ಬಾರಿಸಬೇಕು'' ಎಂದು ಕಿಡಿಕಾರಿದರು.