ಸಂಸತ್ ಚುನಾವಣೆಯಲ್ಲಿ ಮೋದಿಯ ಯೋಜನಾ ತಂತ್ರರಾಗಿದ್ದ ವ್ಯಕ್ತಿ ಇಂದು ನಿತೀಶ್ ಗೆ ಪ್ರಚಾರ ವ್ಯವಸ್ಥಾಪಕ

2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಯೋಜನಾ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಕುಮಾರ್ ಗೆ ಪ್ರಚಾರ ವ್ಯವಸ್ಥಾಪಕ
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on: 

ಪಾಟ್ನಾ: ದೇಶದ ಕೇಂದ್ರಬಿಂದುವಾಗಿರುವ ಬಿಹಾರದ ಚುನಾವಣೆ ನರೇಂದ್ರ ಮೋದಿ- ನಿತೀಶ್ ಕುಮಾರ್ ಪ್ರತಿಷ್ಠೆಯ ಕಣವಾಗಿದ್ದು ನಿತೀಶ್ ಕುಮಾರ್ ಚುನಾವಣೆಯಲ್ಲಿ ಗೆಲ್ಲಲು ಮಹತ್ವದ ರಣತಂತ್ರ ರೂಪಿಸಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಯೋಜನಾ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದ  ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಕುಮಾರ್ ಪ್ರಚಾರ ವ್ಯವಸ್ಥಾಪಕರಾಗಿ ನೇಮಿಸಿಕೊಂಡಿದ್ದಾರೆ. 
ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್, ಮೋದಿ ಅವರ ಆಲೋಚನೆ, ತಂತ್ರಗಳನ್ನು ಚೆನ್ನಾಗಿ ಬಲ್ಲವರಾಗಿದ್ದು, ನಿತೀಶ್ ಕುಮಾರ್ ಗೆ ಪ್ರತಿತಂತ್ರ ರೂಪಿಸಲು ಈ ಅಂಶ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಶಾಂತ್ ಕಿಶೋರ್ ತಂಡ ನಿತೀಶ್ ಕುಮಾರ್ ಅವರ ಫೇಸ್ ಬುಕ್, ವೆಬ್ ಸೈಟ್, ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ವಹಿಸುತ್ತಿದ್ದು. ಅಂಕಿ ಅಂಶಗಳೊಂದಿಗೆ ಬಿಜೆಪಿಯ ಪ್ರಚಾರಕ್ಕೆ ಪ್ರತಿ ಪ್ರಚಾರ ಮಾಡುತ್ತಿದೆ.
ಬಿಜೆಪಿ ಪ್ರಚಾರಕ್ಕಾಗಿ ನ್ಯೂಸ್ ಪೇಪರ್ ಹಾಗೂ ಜಾಹಿರಾತುಗಳಿಗೆ ಹಣ ವ್ಯಯಿಸುತ್ತಿದ್ದರೆ. ಪ್ರಶಾಂತ್ ಕಿಶೋರ್ ಪ್ರಚಾರಕ್ಕಾಗಿ ರೇಡಿಯೋ ಮಾಧ್ಯಮದ ಮೊರೆ ಹೋಗಿದ್ದಾರೆ. ನಿತೀಶ್ ಕುಮಾರ್ ಅವರನ್ನು ಬ್ರಾಂಡ್ ಮಾಡುವುದರಲ್ಲಿ ಎಚ್ಚರಿಕೆ ವಹಿಸಿರುವ ಕಿಶೋರ್ ಲಾಲೂ ಪ್ರಸಾದ್ ಯಾದವ್ ಹಾಗೂ ಸೋನಿಯಾ ಗಾಂಧಿ ಅವರನ್ನು ನಿತೀಶ್ ವರ್ಚಸ್ಸಿಗೆ ಧಕ್ಕೆಯಾಗದಂತೆ  ದೂರವಿಟ್ಟಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com