

ಬೆಂಗಳೂರು: ಸದಾ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುವ ವಿಧಾನ ಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಈಗ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಂದರೆ ಮುಖ್ಯಮಂತ್ರಿ ಮಾತ್ರವಲ್ಲ, ಹೆಣ ಕೂಡ ಎದ್ದು ನಿಲ್ಲಬೇಕು ಹೀಗಿರುವಾಗ ಸಂಸದರ ನಿಯೋಗ ಬಂದಿದ್ದನ್ನು ಯಾರೂ ಗಮನಿಸಲಿಲ್ಲ ಎಂದರೆ ಏನರ್ಥ? ಇದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರ ವ್ಯಂಗ್ಯವಾಡಿದ್ದಾರೆ.
ಸಂಸದರ ನಿಧಿ ಬಳಕೆ ಸಂಬಂಧ ನಿಯೋಗ ವಿಧಾನಸೌಧಕ್ಕೆ ಬಂದಾಗ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ತಡವಾಗಿ ಬಂದಿದ್ದಲ್ಲದೇ. ಬಳಿಕ ಮಾಧ್ಯಮದವರನ್ನು ಕಂಡು ಓಡಿಹೋದರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾಗೋಡು ತಿಮ್ಮಪ್ಪ, ಸಂಸದರ ನಿಯೋಗ ಬರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮೊದಲೇ ಮಾಹಿತಿ ಗೊತ್ತಿದ್ದರೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೆವು ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಬ್ರಹ್ಮಾಂಡ ಬುದ್ಧಿವಂತ, ಮಾಧ್ಯಮಗಳನ್ನು ಕಂಡು ಯಾಕೆ ಹೆದರಿ ಓಡಬೇಕಿತ್ತು ಎಂದು ಮರು ಪ್ರಶ್ನೆ ಹಾಕಿದರು.