ಕಾಂಗ್ರೆಸ್‍ನಿಂದ ಕಳೆದ ಸಲ ಬೀದರ್ ನಲ್ಲಿ ಸೋತಿದ್ದ ರಹೀಂಖಾನ್‍ಗೆ ಹಾಗೂ ದೇವದುರ್ಗ ದಿಂದ ವೆಂಕ ಟೇಶ್ ನಾಯಕ್ ಪತ್ನಿ ಸಾವಿತ್ರಮ್ಮಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಬೆಂಗಳೂರಿನ ಹೆಬ್ಬಾಳಕ್ಕೆ ಅರ್ಧ ಡಜನ್ ಆಕಾಂಕ್ಷಿಗಳ ಪಟ್ಟಿಯೇ ಇದೆ. ವಿಧಾನ ಪರಿಷತ್ತಿನ ಸದಸ್ಯರಾದ ಕುರುಬ ಸಮುದಾಯಕ್ಕೆ ಸೇರಿದ ಎಚ್. ಎಂ.ರೇವಣ್ಣ, ಬೈರತಿ ಸುರೇಶ್, ಕಳೆದ ಸಲ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಶಂಕರ ಶೆಟ್ಟಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಕಳೆದ ಸಲ ಸೋತಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಮೊಮ್ಮತ ರೆಹಮಾನ್ ಷರೀಫ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸಿದ್ದಾರೆ.