ಬೆಂಗಳೂರು: ಕಾಂಗ್ರೆಸ್ ಗೆ ಮಾಜಿ ಸಂಸದ ಎಚ್. ವಿಶ್ವನಾಥ್ ರಾಜಿನಾಮೆ

ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಭಾವನಾತ್ಮಕ ಪತ್ರದ ಮೂಲಕ....
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್
Updated on: 
ಬೆಂಗಳೂರು: ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. 
ಭಾವನಾತ್ಮಕ ಪತ್ರದ ಮೂಲಕ ಪಕ್ಷಕ್ಕೆ ವಿಶ್ವನಾಥ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ವಿಶ್ವನಾಥ್ ರಾಜಿನಾಮೆ ಪತ್ರ ಓದಿದ್ದಾರೆ.
ಮೂಲತಃ ಸಾಹಿತಿಯೂ ಆಗಿರುವ ವಿಶ್ವನಾಥ್ ರಾಜೀನಾಮೆ ನೀಡಲು ಕಾರಣವನ್ನು ಆಸಕ್ತಿಕರವಾಗಿ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ವ ಹಿತಾಸಕ್ತಿ ದೃಷ್ಟಿಯಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. 
 
ಯಾವ ತತ್ವದ ಆಧಾರದಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತೋ, ಅದರ ಆಶಯಕ್ಕೆ ತಕ್ಕಂತೆ ಅಲ್ಲಿ ಯಾವುದೂ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯ ನಂತರ ವಿಶ್ವನಾಥ್ ಅಧಿಕೃತವಾಗಿ ರಾಜೀನಾಮೆ ಪತ್ರ ನೀಡಲಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿ ಸಂವಹನ, ಸಂವಾದ ಇಲ್ಲದಂತಾಗಿದೆ, ಪ್ರಶ್ನೆ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ವಲಸೆ ಬಂದವರಿಗೆ ಕಾಂಗ್ರೆಸ್ ಚಿಮ್ಮು ಹಲಗೆಯಾಗಿದೆ ಎಂದು ನೊಂದು ನುಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com