ನ.7ರಿಂದ ಮೈಸೂರಿನಿಂದ ಚುನಾವಣಾ ಪ್ರಚಾರ ಆರಂಭಗೊಳ್ಳಲಿದ್ದು, ಅಂದಿನಿಂದ ಈ ಅತ್ಯಾಧುನಿಕ ಬಸ್ ಬಳಕೆಯಾಗಲಿದೆ. ಚುನಾವಣಾ ಪ್ರಚಾರಕ್ಕಾಗಿ ಕುಮಾರಸ್ವಾಮಿಯವರು ಬಸ್ಸನ್ನು ಬಳಕೆ ಮಾಡಲಿದ್ದು, 3 ತಿಂಗಳ ಕಾಲ ರಾಜ್ಯಾದ್ಯಂತ ವಿಶೇಷ ಬಸ್ ನಲ್ಲಿ ತೆರಳಲಿದ್ದಾರೆ.
ಕುಮಾರಸ್ವಾಮಿಯವರಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಯಾಗಿರುವುದರಿಂದ ವಿಶೇಷ ಸವಲತ್ತನ್ನು ಬಸ್ಸಿನಲ್ಲಿ ಮಾಡಲಾಗಿದೆ. ಪ್ರಚಾರ ಸಂದರ್ಭದಲ್ಲಿ ಬಸ್ಸಿನಲ್ಲಿ ಉಳಿದುಕೊಂಡು ವಿಶ್ರಾಂತಿ ಪಡೆದು ದಣಿವು ಆರಿಸಿಕೊಳ್ಳಬಹುದಾಗಿದೆ. ಆ ರೀತಿಯಲ್ಲಿ ಬಸ್ಸನ್ನು ಸಜ್ಜುಗೊಳಿಸಲಾಗಿದೆ.
ಪ್ರಚಾರ ಕಾರ್ಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್.ಡಿ. ಕುಮಾರಸ್ವಾಮಿಯವರು, ಶುಕ್ರವಾರದಿಂದಲೇ ಆರಂಭವಾಗಬೇಕಿದ್ದ ಪ್ರವಾಸವನ್ನು ಶಾಸಕ ಚಿಕ್ಕಮಾದು ನಿಧನದಿಂದಾಗಿ ಮುಂದೂಡಲಾಗಿತ್ತು. ನ.7 ರಿಂದ ಮೊದಲ ಹಂತದ ರಾಜ್ಯ ಪ್ರವಾಸವನ್ನು ಆರಂಭಿಸಲಾಗುವುದು. ಈ ಹಿಂದೆ ಮಾಡಲಾಗಿದ್ದ ಯೋಜನೆಯಂತೆಯೇ ಎಲ್ಲಾ ಕಾರ್ಯಗಳು ನಡೆಯಲಿದೆ. ಮೈಸೂರು ಬಳಿಕ ವಿಶೇಷ ಬಸ್ಸಿನಲ್ಲಿಯೇ ಚಿಕ್ಕಮಗಳೂರಿಗೆ ಹೋಗಲಾಗುತ್ತದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿಯೇ ರಾತ್ರಿ ಉಳಿದಿ ಬಳಿಕ ಶಿವಮೊಗ್ಗ ಜಿಲ್ಲೆಗೆ ತೆರಳಿ ಅಲ್ಲಿ ಪಾದಯಾತ್ರೆಯನ್ನು ನಡೆಸಲಾಗುತ್ತದೆ. ನ.7 ರಂದು ರಾಯಚೂರಿನಲ್ಲಿ ಬೈಕ್ ರ್ಯಾಲಿಗಳನ್ನು ನಡೆಸಲಾಗುತ್ತದೆ. ನ.13 ರಂದು ಬೆಳಗಾವಿಯಲ್ಲಿ ಬೃಹತ್ ರ್ಯಾಲಿನ್ನು ಆಯೋಡಿಸಲಾಗಿದೆ ಎಂದು ತಿಳಿಸಿದ್ದಾರೆ.