ಅಂತೆಯೇ "ಯಡಿಯೂರಪ್ಪ, ಈ ರೀತಿಯ ಆಧಾರರಹಿತ ಆರೋಪ ಮಾಡಿರುವುದು ಸರಿಯಲ್ಲ. ರಾಜ್ಯದ ಜನರ ಒಳಿತಿಗಾಗಿ ಕಲ್ಲಿದ್ದಲು ಬ್ಲಾಕ್ ಪಡೆಯಲೆಂದೇ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಣ ಪಾವತಿಸಿದ್ದು, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪ್ರತ್ಯೇಕ ಬ್ಲಾಕ್ ದೊರೆಯದ್ದರಿಂದ ಸರ್ಕಾರ ಕೇಂದ್ರದಿಂದ ಕಲ್ಲಿದ್ದಲು ಖರೀದಿಸುತ್ತಿದ್ದು, ಇದಕ್ಕಾಗಿ ಪ್ರತಿವರ್ಷ ಹೆಚ್ಚುವರಿಯಾಗಿ ರು. 500 ಕೋಟಿ ಪಾವತಿಸಲಾಗುತ್ತಿದೆ. ಆದರೆ, ರಾಜ್ಯದ ಬೊಕ್ಕಸ ಲೂಟಿ ಮಾಡಲಾಗಿದೆ. ಹಗಲು ದರೋಡೆ ನಡೆದಿದೆ ಎಂದು ಯಡಿಯೂರಪ್ಪ ಹೇಳಿದ್ದರಲ್ಲಿ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.