ಬೆಳಗಾವಿ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಶಕಗಳ ಕಾಲದಿಂದ ಬಗೆಹರಿಯದೇ ಉಳಿದುಕೊಂಡು ಬಂದಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಮತ್ತೆ ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರಮುಖ ಸ್ಥಳವಾಗಿರುವ ಬೆಳಗಾವಿಯಲ್ಲಿ ಚುನಾವಣೆಗಾಗಿ ಸಿದ್ಧತೆ ನಡೆಯುತ್ತಿದೆ, ಆದರೆ ಇನ್ನೂ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ,
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗುದ್ದಾಟ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ವರವಾಗಿ ಪರಿಣಮಿಸಿದೆ, ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿದ್ದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಎಂಇಎಸ್ ನಡುವೆ ಇದ್ದ ಭಿನ್ನಮತವನ್ನು ಶಮನಗೊಳಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಎಂಇಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಮತ್ತು ಖಾನಾಪುರಗಳಲ್ಲಿ ಯಾವಾಗಲೂ ಗಡಿ ಸಂಬಂಧವಾಗಿ ಚುನಾವಣಾ ಸಮಯದಲ್ಲಿ ಸಮಸ್ಯೆ ತಲೆದೋರುತ್ತದೆ, ಈ ಬಾರಿ ಚುನಾವಣೆಯಲ್ಲಿ ಬೇರೆ ಪಕ್ಷಗಳ ಒಂತರಿಕ ಜಗಳವನ್ನು ಎಂಇಎಸ್ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆ,
ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಸುಮಾರು ಮಂದಿ ಟಿಕೆಟ್ಆಕಾಂಕ್ಷಿಗಳಿದ್ದಾರೆ. ಒಂದು ವೇಳೆ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದದಿದ್ದರೇ ಬಿಜೆಪಿಯಲ್ಲಿ ಬಂಡಾಯ ಏಳುವ ಸಾಧ್ಯತೆಗಳು ದಟ್ಟವಾಗಿವೆ, ಕಾಂಗ್ರೆಸ್ ನಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂದ ಭಿನ್ನವಾಗಿಲ್ಲ, ಬೆಳಗಾವಿ ಉತ್ತರ ಶಾಸಕ ಫೈರೋಜ್ ಸೇಟ್ ಅವರ ಸ್ಪರ್ಧೆಗೆ ಪಕ್ಷದಲ್ಲೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಒತ್ತಡ ಹಾಕಿದ್ದಾರೆ.
1980 ರಲ್ಲಿ ಎಂಇಎಸ್ ನಿಂದ ಬೆಳಗಾವಿಯಲ್ಲಿ ಐದು ಶಾಸಕರು ಆಯ್ಕೆಯಾಗಿದ್ದರು, ಆದರೆ ನಂತರದ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ 1999ರಲ್ಲಿ ನಡೆದ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲಾಗಿಲ್ಲ, ಮರಾಠಿ ಜನರು ಗಡಿ ಸಮಸ್ಯೆಯನ್ನು ಬಗೆಹರಿಸುವಂತೆ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
1980ರಲ್ಲಿ ಸಭೆ ನಡೆಸಿದ್ದ ಶರದ್ ಪವಾರ್, ಮಹಾಜನ್ ವರದಿ ಒಪ್ಪಿಕೊಳ್ಳುವಂತೆ ಹಾಗೂ ಬೆಳಗಾವಿ ನಗರದಿಂದ ಹೊರಭಾಗದಲ್ಲಿ ಬೆಳಗಾವಿ ಸಿಟಿ ನಿರ್ಮಾಣ ಮಾಡುವಂತೆ ಸಲಹೆ ನೀಡಿದ್ದರು. ಖಾಸಗಿ ಸಭೆಯಲ್ಲಿ ಚರ್ಚಿಸಿದ ಈ ವಿಷಯ ಸೋರಿಕೆಯಾಗಿ ಕಿರಣ್ ಥಾಕೂರ್ ಸೇರಿದಂತೆ ಹಲವು ಎಂಇಎಸ್ ನ ಹಲವು ಮುಖಂಡರು ಶರದ್ ಪವಾರ್ ರಿಂದ ಅಂತರ ಕಾಯ್ದುಕೊಂಡಿದ್ದರು. 30 ವರ್ಷಗಳ ನಂತರ ಬೆಳಗಾವಿಯಲ್ಲಿ ಕಳೆದ ವಾರ ಥಾಕೂರ್ ಮತ್ತು ಶರದ್ ಪವಾರ್ ಒಂದೇ ವೇದಿಕೆ ಹಂಚಿಕೊಂಡಿದ್ದರು, ಈ ಇಬ್ಬರ ನಡುವಿನ ಒಡನಾಟ, ಮತ್ತೆ ಎಂ ಇಎಸ್ ಅಧಿಕಾರ ಕ್ಕೇರಲು ಸಹಾಯವಾಗಲಿದೆ ಎಂಬುದು ರಾಜಕೀಯ ತಕ್ಷರ ಅಭಿಪ್ರಾಯವಾಗಿದೆ.
ಭಾಷಾ ಸಾಮರಸ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಗೆ ಗಮನ ಹರಿಸುವ ನಾಯಕರು ನಮಗೆ ಬೇಕಿದೆ, ರಾಜಕಾರಣಿಗಳು, ನೀರಿನ ಸಮಸ್ಯೆ. ಹಾಗೂ ಜನರ ಭಾವನೆಗಳಿಗೆ ಗಮನ ಕೊಡಬೇಕೆಂದು ಬರಹಗಾರ ಅಶೋಕ್ ಚಂದರಗಿ ಹೇಳಿದ್ದಾರೆ.