ಭಾರತೀಯ ರಿಸರ್ವೆ ಬ್ಯಾಂಕ್ ನಂತಹ ಹಣಕಾಸು ಸಂಸ್ಥೆಗಳಿಗೆ ನೀವು ಗೌರವ ಕೊಡದಿದ್ದರೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತವರು ಹುಟ್ಟಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಭ್ರಷ್ಟರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ನೀರವ್ ಮೋದಿ 30 ಸಾವಿರ ಕೋಟಿ ರುಪಾಯಿ, ವಿಜಯ್ ಮಲ್ಯ, ಲಲಿತ್ ಮೋದಿ ಅವರು ನೂರಾರು ಕೋಟಿ ಜನರ ದುಡ್ಡು ಲೂಟಿ ಹೊಡೆದಿದ್ದಾರೆ. ಅವರೆಲ್ಲ ದೇಶ ಬಿಟ್ಟು ಹೊರ ರಾಷ್ಟ್ರದಲ್ಲಿ ನೆಲೆಸಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.