ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ. ಹೀಗಾಗಿ ನನಗೆ ಹೆಚ್ಚು ಶ್ರಮವಿಲ್ಲ. ಜಿಲ್ಲೆಯ ಕಾರ್ಯಕರ್ತರೇ ತುಂಬಾ ಚೆನ್ನಾಗಿ ಪ್ರಚಾರ ಮಾಡುತ್ತಿದ್ದು, ಹೀಗಾಗಿ ತಮ್ಮ ಮೇಲೆ ಹೆಚ್ಚಿನ ಒತ್ತಡವಿಲ್ಲ. ಇದೇ ಕಾರಣಕ್ಕೆ ತಾವು ಬಾದಾಮಿಯಲ್ಲಿ ಒಂದು ದಿನ ಪ್ರಚಾರ ಮಾತ್ರ ಮಾಡುತ್ತಿದ್ದು, ಅಂದೇ ದೊಡ್ಡ ಮಟ್ಟದಲ್ಲಿ ಸಮಾವೇಶ ಮಾಡುತ್ತೇವೆ ಎಂದು ಸಿದ್ದರಾಮ್ಯಯ ಹೇಳಿದರು.