ಉ: ನಾನು ಮತ್ತು ಶ್ರೀರಾಮುಲು ತುಂಬಾ ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಈ ಹಂತ ತಲುಪುವ ಮುನ್ನ ನಾವು ಜೀವನದಲ್ಲಿ ಹಲವು ಏರಿಳಿತಗಳನ್ನು ನೋಡಿದ್ದೇವೆ, ಅಗತ್ಯ ಇರುವವರಿಗೆ ಸಹಾಯ ಹಾಗೂ ತುಳಿತಕ್ಕೊಳಗಾಗುವವರ ಜೊತೆ ಅವರಿರುತ್ತಾರೆ. ಶ್ರೀರಾಮಲು ರಾತ್ರೋರಾತ್ರಿ ನಾಯಕರಾದವರಲ್ಲ, ಬಳ್ಳಾರಿ ಕಾರ್ಪೋರೇಟರ್ ಆಗಿದ್ದವರು, ನಂತರ ಶಾಸಕ, ಸಚಿವ ಹಾಗೂ ಸಂಸದರಾಗಿದ್ದವರು. ಅವರು ಹುಟ್ಟು ನಾಯಕರು, ರಾಜ್ಯದ ಹಲವು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಶ್ರೀರಾಮುಲು ಮೇಲಿದೆ,