ಬರ ಪರಿಸ್ಥಿತಿ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ಪಿ.ರಾಜೀವ್, ಸರ್ಕಾರ ಸಾಲದ ಶೂಲದಲ್ಲಿ ಸಿಲುಕಿದೆ. ರೈತರು ಪ್ರಾಣಿಗಳು ಸೇರಿದಂತೆ ಜೀವಜಂತುಗಳು ಬರದಿಂದ ನಲುಗುತ್ತಿದ್ದು, ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ. ಬರದ ಕುರಿತು ಅಧ್ಯಯನ ನಡೆಸಲು ಜಿಲ್ಲಾಧಿಕಾರಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು, ತಹಶೀಲ್ದಾರರು, ಕೃಷಿ ವಿವಿಗಳ ವಿಜ್ಞಾನಿಗಳು ಹಳ್ಳಿಗಳಿಗೆ ಹೋಗಿ ಮಲಗಬೇಕು.