ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಹಾಗೂ ಕಾಂಗ್ರೆಸ್ ಬಿಗ್ ಬಾಸ್ ರೀತಿ ವರ್ತಿಸುತ್ತಿದೆ ಎಂಬ ಬಗ್ಗೆ ತಮ್ಮದೇ ಜೆಡಿಎಸ್ ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾರಲ್ಲೂ ಅತೃಪ್ತಿಯಿಲ್ಲ, ನಿಗಮ ಮಂಡಳಿಗಳ ನೇಮಕಾತಿ ಕೂಡ ಸುಗಮವಾಗಿಯೇ ನಡೆಯುತ್ತಿದೆ ಎಂದು ಸಮರ್ಥನೆ ನೀಡಿದ್ದಾರೆ.