ಇಂದು ಕೊಪ್ಪಳ ತಾಲ್ಲೂಕಿನ ಬಸಾಪುರದ ಎಂಎಸ್‌ಪಿಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಧಿಕಾರಕ್ಕೆ ಬರುವ ಮುಂಚೆ ಮೋದಿ ತಾನು ದೇಶದ ಚೌಕಿದಾರ ಎಂದು ಹೇಳುತ್ತಿದ್ದರು. ಲಲಿತ್ ಮೋದಿ, ನೀರವ್ ಮೋದಿ ದೇಶ ಬಿಟ್ಟು ಓಡಿ ಹೋಗುವಾಗ ಎಲ್ಲಿ ಹೋಗಿದ್ದರು ಈ ಚೌಕಿದಾರ ಎಂದು ವ್ಯಂಗ್ಯವಾಡಿದರು. ಅಲ್ಲದೆ ಪ್ರಧಾನಿ ಮೋದಿ ನೀಡಿದ ಕುಮ್ಮಕ್ಕಿನಿಂದಲೇ ಅವರು ದೇಶ ತೊರೆದಿದ್ದಾರೆ ಎಂದು ಆರೋಪಿಸಿದ್ದಾರೆ.