2:1 ಪ್ರಮಾಣದಲ್ಲಿ ಹಂಚಿಕೆ ಸೂತ್ರಕ್ಕೆ 'ದೋಸ್ತಿ'ಗಳ ಸಮ್ಮತಿ: ಕಾಂಗ್ರೆಸ್ ಪಾಲಾದ ನಿಗಮ ಮಂಡಳಿ ಲಿಸ್ಟ್ ಇಲ್ಲಿದೆ!

Published On :
ಬೆಂಗಳೂರು: ಸಂಪುಟದ ಖಾತೆ ಹಂಚಿಕೆಯ ಕಗ್ಗಂಟು ಒಂದು ಹಂತಕ್ಕೆ ನಿವಾರಣೆಯಾದ ನಂತರ ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ -ಜೆಡಿಎಸ್ ಒಮ್ಮತಕ್ಕೆ ಬಂದಿವೆ.
30 ನಿಗಮ ಮಂಡಳಿ ಹಂಚಿಕೆಯಲ್ಲಿ 2:1 ಅನುಪಾತದಲ್ಲಿ ಹಂಚಿಕೆ ಸೂತ್ರಕ್ಕೆ ಎರಡು ಪಕ್ಷಗಳು ಒಪ್ಪಿವೆ,
ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿ ಯಾಗಿರುವುದಕ್ಕೆ ಪಕ್ಷದ ಶಾಸಕರು ಖುಷಿಯಾಗಿದ್ದಾರೆ. ಮೂವತ್ತರಲ್ಲಿ 20 ಕಾಂಗ್ರೆಸ್ಗೆ, 10 ಜೆಡಿಎಸ್ಗೆ ಸಿಗಲಿದೆ. ಜೆಡಿಎಸ್ ಹೊಂದಿರುವ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳೆಲ್ಲವೂ ಆ ಪಕ್ಷಕ್ಕೆ ಹೋಗುತ್ತದೆ. ಅಂತೆಯೇ ಕಾಂಗ್ರೆಸ್ಗೂ ಕೂಡ ಅದರ ಖಾತೆಗಳಿಗನುಸಾರವಾಗಿ ನಿಗಮ ಮಂಡಳಿಗಳು ಸಿಗುತ್ತವೆ
ಕಾಂಗ್ರೆಸ್ಗೆ ಸಿಗಲಿರುವ ಮಂಡಳಿಗಳು:
- ತೆಂಗು ನಾರು ಅಭಿವೃದ್ದಿ ಮಂಡಳಿ
- ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ
- ಬಿಡಿಎ
- ಜಲಮಂಡಳಿ
- ಸ್ಲಂ ಬೋರ್ಡ್
- ಗೃಹ ಮಂಡಳಿ
- ಅರಣ್ಯ ಮತ್ತು ಕೈಗಾರಿಕಾ ಅಭಿವೃದ್ದಿ ನಿಗಮ
- ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ದಿ ನಿಗಮ
- ಅಹಾರ ಮತ್ತು ನಾಗರಿಕ ಪೂರೈಕೆ ನಿಗಮ.
- ದೇವರಾಜ ಅರುಸು ನಿಗಮ
- ಅಂಬೇಡ್ಕರ್ ನಿಗಮ
- ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮ
- ಹಟ್ಟಿ ಗೋಲ್ಡ್ ಮೈನ್ಸ್
- ವಕ್ಫ್ ಬೋರ್ಡ್, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ
- ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಂಡಳಿ.
- ಕರಾವಳಿ ಅಭಿವೃದ್ದಿ ಮಂಡಳಿ
ಜೆಡಿಎಸ್ ಗೆ ಸಿಗಲಿರುವ ನಿಗಮ- ಮಂಡಳಿಗಳು
- ಬಿಎಂಟಿಸಿ ಕೆಎಸ್ಆರ್ಟಿಸಿ
- ಬೆಸ್ಕಾಂ
- ಕರ್ನಾಟಕ ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ದಿ ನಿಗಮ
- ಪ್ರವಾಸೋದ್ಯಮ ಅಭಿವೃದ್ದಿ ನಿಗಮ
- ಕರ್ನಾಟಕ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್
- ಎಂಎಸ್ಐಎಲ್
- ಕರ್ನಾಟಕ ಜವಳಿ ಅಭಿವೃದ್ದಿ ನಿಗಮ
- ರೇಷ್ಮೆ ಕೈಗಾರಿಕೆ ಅಭಿವೃದ್ದಿ ನಿಗಮ
- ಕೈಮಗ್ಗ ಅಭಿವೃದ್ದಿ ನಿಗಮ ಮಂಡಳಿ
- ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ
- ಕುರಿ ಅಭಿವೃದ್ದಿ ನಿಗಮ.
ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಲಾಗುವುದು, ನಂತರದ ಸುತ್ತಿನಲ್ಲಿ ಶಾಸಕರಲ್ಲದವರನ್ನು ಪರಿಗಣಿಸಲಾಗುತ್ತದೆ. ಎರಡು ಪಕ್ಷಗಳಲ್ಲೂ ಅಧ್ಯಕ್ಷ ಗಿರಿಗಾಗಿ ಲಾಬಿ ಆರಂಭವಾಗಿದೆ, ಸ್ಲಂ ಬೋರ್ಡ್ ಮತ್ತು ಬಿಡಿಗೆ ಗೆ ಕಾಂಗ್ರೆಸ್ ಶಾಸಕ. ಎಸ್ ಟಿ ಸೋಮಶೇಖರ್ , ಬೈರತಿ ಬಸವರಾಜ್ ಮತ್ತು ಎಂ.ಟಿ ಬಿ ನಾಗರಾಜ್ ಲಾಬಿ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


