ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿ ನಿಟ್ಟಿಸಿರು ಬಿಡುವ ವೇಳೆ ಗುರುವಾರ ಬಿಜೆಪಿ ಸಭಾತ್ಯಾಗ ಮಾಡಿ ಹೊರ ನಡೆಯಿತು.
ಹೊಸ ಬಜೆಟ್ ಮಂಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಪೂರ್ಣಪ್ರಮಾಣದ ಆಯವ್ಯಯ ಮಂಡಿಸಿದರು. ಬಜೆಟ್ ಅಧಿವೇಶನ ಮುಗಿಯುವ ವೇಳೆದೆ ದೋಸ್ತಿ ಪಕ್ಷಗಳ ನಡುವಿನ ಅಂತರ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವೈಮನಸ್ಯ ಮತ್ತಷ್ಟು ಹೆಚ್ಚಾಗಿದೆ.
ಹಿಂದಿನ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಮುಂದುವರಿಸಿ ಆ ಮೂಲಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಪಡೆಯುವಲ್ಲಿ ಕುಮಾರ ಸ್ವಾಮಿ ಸಫಲರಾದರು. ಆದರೆ ಬಜೆಟ್ ನಲ್ಲಿ ಅನ್ನ ಭಾಗ್ಯ ಅಕ್ಕಿ 7 ಕೆಜಿಗೆ ಬದಲಾಗಿ 5ಕೆಜಿಗೆ ಇಳಿಸಿದ ಕುಮಾರ ಸ್ವಾಮಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ ಪಾಟೀಲ್, ಶಾಸಕ ಸುಧಾಕರ್, ವಿಧಾನ ಸಭೆಯಲ್ಲಿ ಬಹಿರಂಗವಾಗಿ ವಾಗ್ದಾಳಿ ನಡೆಸಿದರು, ಜೊತೆಗೆ ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿ ಅಪರಿಗೆ ಎಚ್ಚರಿಕೆ ನೀಡಿದ್ದಾರೆ,
ಕಾಂಗ್ರೇಸ್ ನಾಯಕರ ವಾಗ್ದಾಳಿಯಿಂದಾಗಿ ಸಿದ್ದರಾಮಯ್ಯ ಕುಮಾರ ಸ್ವಾಮಿಗೆ ಪತ್ರ ಬರೆದು ಅನ್ನ ಭಾಗ್ಯ ಅಕ್ಕಿ ಯನ್ನು 7 ಕೆಜಿ ಕೊಡುವಂತೆ ಹಾಗೂ ಪೆಟ್ರೋಲ್ ಡಿಸೇಲ್ ಬೆಲೆ ಇಳಿಸುವಂತೆ ಸೂಚಿಸಿದ್ದರು.
ಇನ್ನೂ ಬಜೆಟ್ ನಲ್ಲಿ ಐತಿಹಾಸಿಕ ರೈತರ ಸಾಲ ಮನ್ನಾ ಘೋಷಣೆ ಮಾಡಿದ ಕುಮಾರ ಸ್ವಾಮಿ 34 ಸಾವಿರ ಕೋಟಿರು. ಬೆಳೆ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ, ಇದು ಜೆಡಿಎಸ್ ಪಕ್ಷ ವರ್ಚಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಸಿಟ್ಟು, ಸೆಡವು ಅಸಮಾಧಾನದಲ್ಲಿ ಆರಂಭಗೊಂಡಿದ್ದ ಬಜೆಟ್ ಅಧಿವೇಶನ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆಯಿಲ್ದದೇ ಹಾಗೆಯೇ ಮುಗಿದಿದೆ, ಮುಂದಿನಮ ಲೋಕಸಭೆ ಚುನಾವಣೆವರೆಗೂ ಸ್ವಲ್ಪ ಅಡ್ಜಸ್ಟ್ ಮಾಡಿ ಸ್ಥಿತಿಯಲ್ಲಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುಂದುವರಿಯಲಿದೆ.