ವಿಧಾನ ಪರಿಷತ್ ಸದಸ್ಯರಾಗಿ 3 ಪಕ್ಷದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ರಾಜ್ಯದ ವಿಧಾನ ಪರಿಷತ್ ಸದಸ್ಯರಾಗಿ ಮೂರು ಪಕ್ಷಗಳ ಹನ್ನೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ 3 ಪಕ್ಷದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ
ವಿಧಾನ ಪರಿಷತ್ ಸದಸ್ಯರಾಗಿ 3 ಪಕ್ಷದ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ
ಬೆಂಗಳೂರು: ರಾಜ್ಯದ ವಿಧಾನ ಪರಿಷತ್  ಸದಸ್ಯರಾಗಿ ಮೂರು ಪಕ್ಷಗಳ ಹನ್ನೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ 5,  ಕಾಂಗ್ರೆಸ್ ನ 4 ಹಾಗು ಜೆಡಿಎಸ್ ನ ಇಬ್ಬರು ಅಭ್ಯರ್ಥಿಗಳು ಪರಿಷತ್ತಿಗೆ ಪ್ರವೇಶ ಪಡೆದಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದು ಇದಾಗಲೇ ಸಚಿವಸ್ಥಾನ ಹಾಗೂ ಖಾತೆಗಳಿಗಾಗಿ ಲಾಬಿ ಪ್ರಾರಂಭವಾಗಿದೆ. ಈ ನಡುವೆಯೇ ಮೇಲ್ಮನೆ ಸದಸ್ಯರಾಗಿ ಹನ್ನೊಂದು ಮಂದಿ ಆಯ್ಕೆಗೊಂಡಿದ್ದಾರೆ.
ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೊರತಾಗಿ ಇನ್ನಾರೂ ನಾಮಪತ್ರ ಸಲ್ಲಿಕೆ ಮಾಡದ ಕಾರಣ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿದ ಚುನಾವಣಾಧಿಕಾರಿ ಕುಮಾರಸ್ವಾಮಿ ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಅವಿರೋಧ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು. 
ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಮೂರು ಪಕ್ಷದ ಅಭ್ಯರ್ಥಿಗಳ ವಿವರ ಇಂತಿದೆ-
ಬಿಜೆಪಿ: ರವಿ ಕುಮಾರ್, ತೇಜಸ್ವಿನಿ ಗೌಡ, ರಘುನಾಥ್, ಕೆಪಿ ನಂಜುಂಡಿ, ಮತ್ತು ರುದ್ರೇಗೌಡ
ಕಾಂಗ್ರೆಸ್:  ಕೆ.ಗೋವಿಂದರಾಜ್, ಸಿಎಂ ಇಬ್ರಾಹಿಂ, ಅರವಿಂದ ಕುಮಾರ ಅರಳಿ ಮತ್ತು ಹರೀಶ್ ಕುಮಾರ್.
ಜೆಡಿಎಸ್: ಬಿಎಂ ಫಾರೂಖ್ ಮತ್ತು, ಎಸ್ ಐ ಬೈರೇಗೌಡ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com