ಹುಬ್ಬಳ್ಳಿ: ಇತ್ತೀಚೆಗೆ ನಡೆದ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಬಾಂಬೆ-ಕರ್ನಾಟಕ ಪ್ರದೇಶದಲ್ಲಿ ಅಭ್ಯರ್ಥಿಗಳು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ 2 ಪಕ್ಷಗಳು ಸಂಪುಟದಲ್ಲಿ ಈ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ.
ಎಚ್.ಕೆ ಪಾಟೀಲ್, ಬಸವರಾಜ ಹೊರಟ್ಟಿ, ಎಂ.ಬಿ ಪಾಟೀಲ್ ಹಾಗೂ ಎಸ್ ಆರ್ ಪಾಟೀಲ್ ಅವರಂಥ ಘಟಾನುಘಟಿ ನಾಯಕರುಗಳು ಸಂಪುಟದಲ್ಲಿ ಸಚಿವ ಸ್ಥಾವ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ನ ಎಂ ಬಿ ಪಾಟೀಲ್ ಮತ್ತು ಜೆಡಿಎಸ್ ನ ಹೊರಟ್ಟಿ ಅವರನ್ನು ಕೈಬಿಟ್ಟಿದ್ದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಈ ಇಬ್ಬರು ನಾಯಕರು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು. ಜಾತಿ ಹೋರಾಟಕ್ಕೆ ಮುಂದಾಗಿದ್ದು ಪಕ್ಷದ ಮುಖಂಡರಿಗೆ ಕೋಪ ತರಿಸಿರಬಹುದು ಎಂದು ಊಹಿಸಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈ ಗೊಂಬೆಗಳಂತೆ ವರ್ತಿಸಿದ ಹಿನ್ನೆಲೆಯಲ್ಲಿ ಲಿಂಗಾಯತ ಮತಗಳ ವಿಭಜನೆಯಿಂದಾಗಿ ಬಿಜೆಪಿಗೆ ಲಾಭವಾಯಿತು.
ಲಿಂಗಾಯತ ಹೋರಾಟ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದು ಹೊರಟ್ಟಿ ಪದೇ ಪದೇ ಹೇಳಿಕೆ ನೀಡಿದ್ದರು. ಹೊರಟ್ಟಿ ಅವರ ಈ ಹೋರಾಟದಿಂದ ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಅವರ ಕೋಪಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿದೆ, ಈಗ ಸದ್ಯ ಲಿಂಗಾಯತ ಖೋಟಾದಲ್ಲಿ ಜೆಡಿಎಸ್ ನಲ್ಲಿ ಕೇವಲ ಒಂದೇ ಒಂದು ಸಚಿವ ಸ್ಥಾನ ಖಾಲಿಯಿದೆ.
ಲಿಂಗಾಯತರ ಪ್ರಧಾನ ಭೂಮಿಯಲ್ಲಿ ಲಿಂಗಾಯತ ನಾಯಕರಿಗೆ ಬಹಳ ದೊಡ್ಡ ಹಿನ್ನೆಡೆಯಾಗಿದೆ.