ರಾಜಕೀಯ

ರಾಹುಲ್ ಗಾಂಧಿ ಭೇಟಿ ಭರವಸೆ: ತಗ್ಗಿದ ಪಾಟೀಲ್ ಬಣದ ಭಿನ್ನಮತ

ರಾಹುಲ್ ಗಾಂಧಿ ಭೇಟಿ ಭರವಸೆ: ತಗ್ಗಿದ ಪಾಟೀಲ್ ಬಣದ ಭಿನ್ನಮತ
ವೇಣುಗೋಪಾಲ್ ಮತ್ತು ಎಚ್,ಕೆ ಪಾಟೀಲ್
Published On :
ಬೆಂಗಳೂರು: ಸಂಪುಟ ಹಂಚಿಕೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿದ್ದ ಭಿನ್ನಮತ ನಿಧಾನವಾಗಿ ತಗ್ಗುತ್ತಿದೆ. ಹಿರಿಯ ನಾಯಕ ಎಚ್ .ಕೆ ಪಾಟೀಲ್ ಗುರುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ.
ಭೇಟಿ ಬಳಿಕ ತಮ್ಮ ಬಿನ್ನಮತಕ್ಕೆ ಪರಿಣಾಮಕಾರಿಯಾದ ಪರಿಹಾರ ಸಿಕ್ಕಿದ್ದು, ಶೀಘ್ರವೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಭರವಸೆ ಎಚ್.ಕೆ ಪಾಟೀಲ್ ಅವರಿಗೆ ಸಿಕ್ಕಿದೆ. ಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಅಸಮಾಧಾನಕ್ಕೆ ಯಾರೂ ಪ್ರತ್ಯೇಕ ಸಭೆ ನಡೆಸಬಾರದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. 
ಗುಲಾಂ ನಬಿ ಆಜಾದ್ ಅವರ ಜೊತೆಗೆ ಮೂರು ಸುತ್ತಿನ ಮಾತುಕತೆ ನಂತರ ಎಚ್.ಕೆ ಪಾಟೀಲ್ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ,
 ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗಳನ್ನು ಪಕ್ಷ ಬಗೆಹರಿಸುತ್ತದೆ ಎಂಬ ನಂಬಿಕೆಯಿದೆ, ನಮ್ಮ ದೂರು ದುಮ್ಮಾನಗಳನ್ನು ವೇಣುಗೋಪಾಲ್ ಅವರ ಬಳಿ ಹೇಳಿಕೊಂಡಿದ್ದೇವೆ ಎಂದು ಎಚ್.ಕೆ ಪಾಟೀಲ್ ತಿಳಿಸಿದ್ದಾರೆ. 
ರಾಜ್ಯದಲ್ಲಿ ನಮ್ಮ ಸಮುದಾಯದ ನಾಯಕತ್ವವನ್ನು ಮುಗಿಸುವ ಯತ್ನ ನಡೆಯುತ್ತಿದೆ. ಅರ್ಹರಲ್ಲದವರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಾರೆ. ಜಮೀರ್ ಅಹ್ಮದ್ ಖಾನ್ ಹಾಗೂ ಯು.ಟಿ ಖಾದರ್ ರಾಜ್ಯಮಟ್ಟದಲ್ಲಿ ನಮ್ಮ ಸಮುದಾಯವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿಲ್ಲ. ಆ ನಾಯಕತ್ವ ಗುಣ ಅವರಲ್ಲಿ ಇಲ್ಲ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ವೇಣುಗೋಪಾಲ್,ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುತ್ತದೆ ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
2 ವರ್ಷದ ನಂತರ ಸಂಪುಚಟ ಪುನಾರಚನೆಯಾಗಲಿದ್ದು ಖಾತೆ ಬದಲಾವಣೆ ಮಾಡಲಾಗುವುದು, ಈ ವೇಳೆ ಕೆಲವೊಂದು ಸಚಿವರನ್ನು ಬದಲಾಯಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಮಾತನಾಡಿ, 2ನೇ ಹಂತದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ನನಗೆ ಅವಕಾಶ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಎಂದು ಬೆಂಬಲಿಗರು, ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ. ಸಮುದಾಯಕ್ಕೆ ಅವಕಾಶ ಕೊಡುವುದಾಗಿ ವೇಣುಗೋಪಾಲ್ ಹೇಳಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.