ನೋ ರಾಜಕೀಯ, ಓನ್ಲಿ ಪ್ರಜಾಕೀಯ, ಕೆಪಿಜೆಪಿಗೆ ಉಪೇಂದ್ರ ಗುಡ್ ಬೈ

ಯಾವುದೇ ಕಾರಣಕ್ಕೂ ತಾವು ರಾಜಕೀಯ ಮಾಡುವುದಿಲ್ಲ. ತಾವು ಪ್ರಜಾಕೀಯದಲ್ಲೇ ಮುಂದುವರೆಯುತ್ತೇವೆ ಎಂದು ಹೇಳಿದ ನಟ ಉಪೇಂದ್ರ ಕೆಪಿಜೆಪಿಗೆ ರಾಜಿನಾಮೆ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಯಾವುದೇ ಕಾರಣಕ್ಕೂ ತಾವು ರಾಜಕೀಯ ಮಾಡುವುದಿಲ್ಲ. ತಾವು ಪ್ರಜಾಕೀಯದಲ್ಲೇ ಮುಂದುವರೆಯುತ್ತೇವೆ ಎಂದು ಹೇಳಿದ ನಟ ಉಪೇಂದ್ರ ಕೆಪಿಜೆಪಿಗೆ ರಾಜಿನಾಮೆ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ತಾವರೆಕೆರೆ ಬಳಿ ಇರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಪ್ರಜಾಕೀಯ ಅಭ್ಯರ್ಥಿಗಳೊಂದಿಗೆ ನಡೆದ ಮಹತ್ವದ ಸಭೆ ಬಳಿಕ ನಟ ಉಪೇಂದ್ರ ಈ ಬಗ್ಗೆ ಘೋಷಣೆ ಮಾಡಿದ್ದು, ತತ್ ಕ್ಷಣದಿಂದಲೇ ತಾವೂ ಹಾಗೂ ತಮ್ಮ ಅಭ್ಯರ್ಥಿಗಳು ಕೆಪಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಕೆಪಿಜೆಪಿ ಪಕ್ಷದ ಸಂಸ್ಥಾಪಕ ಮಹೇಶ್  ಗೌಡ ಅವರೊಂದಿಗಿನ ವಿರಸಕ್ಕೆ ಫುಲ್ ಸ್ಟಾಪ್ ಹಾಕಿರುವ ನಟ ಉಪೇಂದ್ರ, ತಾವು ಕೆಪಿಜೆಪಿ ಪಕ್ಷದಿಂದಲೇ ಹೊರಬರುತ್ತಿರುವುದಾಗಿ ಹೇಳಿದರು. ಅಂತೆಯೇ ತತ್ ಕ್ಷಣದಿಂದ ತಮಗೂ ಕೆಪಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಅವರಿಗೆ ರಾಜಕೀಯ ಬೇಕು. ಆದರೆ ನಮಗೆ ಪ್ರಜಾಕೀಯವೇ ಬೇಕು. ನಾವೆಲ್ಲರೂ ರಾಜಕೀಯ ಒಪ್ಪಿ ಬಂದವರಲ್ಲ. ಪ್ರಜಾಕೀಯವನ್ನು ಒಪ್ಪಿ ಅದರಲ್ಲೇ ಹೋರಾಡಲು ಬಂದವರು ನಾವು. ಪ್ರಜಾಕೀಯವನ್ನು ಒಪ್ಪಿ ಅಪ್ಪಿಕೊಂಡವರು ನಾವು. ಹೀಗಾಗಿ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಮರಳುವುದಿಲ್ಲ. ಹೀಗಾಗಿಯೇ ಕೆಪಿಜೆಪಿಗೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಉಪೇಂದ್ರ ಘೋಷಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com