ರಾಜ್ಯಸಭಾ ಚುನಾವಣೆಗೆ ರಾಜೀವ್ ಆಯ್ಕೆ: ಬಿಜೆಪಿ ವಿರುದ್ಧ 'ನಮಗೆ ಮೋಸ' ಯುದ್ಧ ಸಾರಿದ ಕಾಂಗ್ರೆಸ್

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ 'ನಮೋ' ಎಂದರೆ 'ನಮಗೆ ಮೋಸ'...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ 'ನಮೋ' ಎಂದರೆ 'ನಮಗೆ ಮೋಸ' ಎಂದು ಆರೋಪಿಸಿ ಬಿಜೆಪಿ ವಿರುದ್ಧ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ. 
ಕನ್ನಡ ನಾಡು, ನುಡಿ, ಜಲ ವಿಚಾರಗಳಲ್ಲಿ ಮಲತಾಯಿ ಧೋರಣೆ ತೋರಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ರಾಜ್ಯ ಬಿಜೆಪಿ ನಾಯಕರು, ಇದೀಗ ಕನ್ನಡೇತರಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವ ಮೂಲಕ ರಾಜ್ಯ ವಿರೋಧಿ ನಿಲುವು ತಾಳಿದೆ ಎಂದು 10 ಆರೋಪಗಳನ್ನು ಮಾಡಿದೆ. 
ಬಿಜೆಪಿ ಪದೇ ಪದೇ ಕನ್ನಡೇತರರನ್ನು ಆಯ್ಕೆ ಮಾಡುತ್ತಿದೆ. ಇದೀಗ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದೆ. ನಿಜಕ್ಕೂ ಕರ್ನಾಟಕದ ಹಿತಾಸಕ್ತಿಗಳನ್ನು ಸಂಸತ್ತಿನಲ್ಲಿ ರಾಜೀವ್ ಚಂದ್ರಶೇಖರ್ ಅವರು ಪ್ರತಿನಿಧಿಸಬಲ್ಲರೇ? ಬಿಜೆಪಿಗೆ ಕರ್ನಾಟಕದಲ್ಲಿ ಯಾವುದೇ ವ್ಯಕ್ತಿಗಳೂ ಸಿಗಲಿಲ್ಲವೇ? ಪ್ರಶ್ನಿಸಿದೆ. 
ಚಂದ್ರಶೇಖರ್ ಅವರು, ಸ್ವತಂತ್ರ ರಾಜ್ಯಸಭಾ ಸದಸ್ಯರಾಗಿದ್ದು, ಬಿಜೆಪಿಯಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆಯಾದ ಮರುದಿನವೇ ರಾಜೀವ್ ಚಂದ್ರಶೇಖರ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂದಿದ್ದಾರೆ. 
ಮಹದಾಯಿ ವಿವಾದ ಬಗೆಹರಿಸುವಂತೆ ಹಲವು ಬಾರಿ ಪ್ರಧಾನಮಂತ್ರಿಗಳ ಬಳಿ ಮನವಿ ಮಾಡಿಕೊಂಡರೂ ಕೇಂದ್ರ ಕೀಳುಮಟ್ಟದ ರಾಜಕಾರಣವನ್ನು ಮಾಡುತ್ತಿದೆ. ಕಾವೇರಿ ನದಿ ನೀರು ವಿವಾದ ಬಗೆಹರಿಸು ಮೋದಿಯವರು ಒಲವು ತೋರಿಸಲಿಲ್ಲ. ಸರ್ವಪಕ್ಷ ಸಭೆ ಕರೆದರೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಬರಲಿಲ್ಲ. 
ಪ್ರಾದೇಶಿಕ ಗ್ರಾಮೀಣಿ ಬ್ಯಾಂಕಿಂಗ್ ಪರೀಕ್ಷೆ (ಐಬಿಪಿಎಸ್)ಯನ್ನು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಿ, ಕನ್ನಡ ಮಾಧ್ಯಮವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೂ ಈ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ. 
ನಗರದ ಹೊರವಲಯದ ತರಳು ಗ್ರಾಮದಲ್ಲಿದ್ದ ಸಿಆರ್'ಪಿಎಫ್ ಕಚೇರಿಯನ್ನು ಉತ್ತರಪ್ರದೇಶದಲ್ಲಿರುವ ರಾಜನಾಥ್ ಸಿಂಗ್ ತವರು ಪ್ರದೇಶ ಚಾಂದೌಲಿಗೆ ಸ್ಥಳಾಂತರಿಸಲಾಗಿದೆ. ಇದು ಸರ್ಕಾರದ ನಿಷ್ಠುರತೆಗೆ ನಿದರ್ಶನವಾಗಿದೆ. 
ರಾಜ್ಯ ಸರ್ಕಾರ ನಾಡಧ್ವಜಕ್ಕೆ ಹೊಸ ರೂಪು ನೀಡಿ ಕನ್ನಡದ ಮೆರೆಗು ಹೆಚ್ಚಿಸಿದೆ. ಪ್ರತ್ಯೇಕ ಕರ್ನಾಟಕ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕನ್ನಡ ವಿರೋಧಿ ಧೋರಣೆ ತಾಳಿದ್ದಾರೆ. ರಫೇಲ್ ಒಪ್ಪಂದವನ್ನು ಅನಿಲ್ ಅಂಬಾನಿಗೆ ನೀಡಿದ್ದಾರೂ ಏಕೆ? ಎಂದು ಪ್ರಶ್ನಿಸಿದೆ. 
ಇದಲ್ಲದೆ ಸಿದ್ದರಾಮಯ್ಯ ಅವರೂ ಕೂಟ ಟ್ವಿಟ್ಟರ್ ನಲ್ಲಿ ಟ್ವೀಕ್ ಮಾಡಿದ್ದು, ಕನ್ನಡಿಗರ ಮೇಲೆ ಪರಿಣಾಮ ಬೀರುವ ನಿಜವಾದ ಸಮಸ್ಯೆಗಳಿಗೆ ಉತ್ತರಿಸುವ ಧೈರ್ಯ ಬಿಜೆಪಿ ನಾಯಕರಿಗಿದೆಯೇ? ಕನ್ನಡ ನಾಡು, ನುಡಿ, ಜಲ ಹಾಗೂ ಸಂಸ್ಕೃತಿಯನ್ನು ಬಿಜೆಪಿ ನಾಯಕರು ಗೌರವಿಸುತ್ತಾರೆಯೇ? ಇಲ್ಲ, ಏಕೆಂದರೆ, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ವದಂತಿಗಳನ್ನು ಹಬ್ಬಿಸುವ ಕೆಲಸದಲ್ಲಿ ಕಾರ್ಯನಿರತರಾಗಿದ್ದಾರೆಂದು ಹೇಳಿದ್ದಾರೆ. 
ಸಿದ್ದರಾಮಯ್ಯ ಅವರ ಟ್ವೀಟ್'ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸರ್, ಎಲ್ಲಾ ಆರೋಪಗಳಿಗೂ ನಾವು ಸರಿಯಾದ ಸಮಯದಲ್ಲಿಯೇ ಉತ್ತರವನ್ನು ನೀಡಿದ್ದೇವೆ. ಆ ಸಮಯದಲ್ಲಿ ನೀವು ಮಲಗಿದ್ದಿರಿ ಎನಿಸುತ್ತದೆ. ಇದೀಗ ನೀವು ಎದ್ದಂತೆ ಕಾಣಿಸುತ್ತಿದೆ. ಸ್ಟ್ರಾಂಗ್ ಆಗಿರುವ ಕಾಫಿಯವನ್ನು ಕುಡಿಯಿರಿ. ನಿದ್ದೆಗಣ್ಣಿನಿಂದ ಹೊರಬರಲು ಅದು ಸಹಾಯ ಮಾಡಬಹುದು. ನಂತರ ನಮ್ಮ ಪ್ರತಿಕ್ರಿಯೆಗಳನ್ನು ಓದಿ ಎಂದು ವ್ಯಂಗ್ಯವಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com