ಫೇಸ್ ಬುಕ್ ನಲ್ಲಿ ರಾಜಕೀಯ ಪ್ರಯಾಣ ಬಿಟ್ಟಿಟ್ಟ ಬಿಜೆಪಿ ಮುಖಂಡ ಕೆಜಿ ಬೋಪಯ್ಯ

ಬಿಜೆಪಿ ಹಿರಿಯ ಮುಖಂಡ, ವಿರಾಜಪೇಟೆ ಶಾಸಕ ಹಾಗೂ ಮಾಜಿ ವಿಧಾನಸಭೆ ಸ್ಪೀಕರ್ ಕೆಜಿ ಬೋಪಯ್ಯ ಫೇಸ್ ಬುಕ್ ನಲ್ಲಿ ತಮ್ಮ ರಾಜಕೀಯ ಜೀವನ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಜಕಾರಣಿಗಳು ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದು, ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಬಿಜೆಪಿ ಪಕ್ಷದ ಹಿರಿಯ ಮುಖಂಡ, ವಿರಾಜಪೇಟೆ ಶಾಸಕ ಹಾಗೂ ಮಾಜಿ ವಿಧಾನಸಭೆ ಸ್ಪೀಕರ್ ಕೆಜಿ ಬೋಪಯ್ಯ ಫೇಸ್ ಬುಕ್ ನಲ್ಲಿ ತಮ್ಮ ರಾಜಕೀಯ ಜೀವನ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಅಂದರೆ ಕಳೆದ ಎರಡು ದಿನಗಳ ಹಿಂದೆಯ ಪಕ್ಷದ ಕಾರ್ಯಕರ್ತರಿಗೆ ಹಾಗೂ ತಮ್ಮ ಕ್ಷೇತ್ರದ ಮತದಾರರಿಗೆ ಸರ್ ಪ್ರೈಸ್ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದ ಕೆಜಿ ಬೋಪ್ಪಯ್ಯ ಅವರು, ಇದೀಗ ತಾವು ರಾಜಕೀಯದಲ್ಲಿ ನಡೆದು  ಬಂದ ಹಾದಿಯನ್ನು ಮತದಾರರಿಗೆ ವಿವರಿಸುವ ಮೂಲಕ ಅವರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ. 
ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿರುವ ಬೋಪಯ್ಯ ಅವರು, 'ಒಬ್ಬ ಸಾಮಾನ್ಯ ಕಾರ್ಯಕರ್ತ ನಡೆದು ಬಂದ ಹಾದಿಯನ್ನು ಜನರ ಬಳಿ ಹಂಚಿಕೊಳ್ಳುವ ತವಕ!.. ಹಣಬಲ , ಜಾತಿಬಲವಿಲ್ಲದ ನನಗೆ, ನನ್ನ ಐಡೆಂಟಿಟಿಯೆ, ನನ್ನ ಕಾಯಕ!.. ಒಬ್ಬ ಸಾಮಾನ್ಯ ಕಾರ್ಯಕರ್ತ ಶ್ರಮದಿಂದ ಹೇಗೆ ಬೆಳೆಯಬಹುದು ಎಂಬುವುದ್ದಕ್ಕೆ ನಾನೇ ಉದಾಹರಣೆ!.. ನಾನು ನಡೆದು ಬಂದ ಮುಳ್ಳಿನ ಹಾದಿಯನ್ನು ನಿಮ್ಮ ಮುಂದೆ ಇಂದಿನಿಂದ ಬಿಚ್ಚಿಡುತ್ತಿದ್ದೇನೆ.. ಅದುವೆ ನಮ್ಮ ಕಾರ್ಯಕರ್ತರಿಗೆ,ನಾನು ನೀಡುತ್ತಿರುವ pleasant surprise!! Jai BJP !!! ಎಂದು ಬರೆದು ಕೊಂಡಿದ್ದಾರೆ.
ಅಲ್ಲದೆ ಇದರ ಮುಂದುವರಿದ ಭಾಗವೆಂಬಂತೆ ಇಂದು #ಕಾಲೂರುtoವಿಧಾನಸೌಧ #ಒಬ್ಬಸಾಮಾನ್ಯಕಾರ್ಯಕರ್ತನಹೆಜ್ಜೆಗುರುತು ಎಂಬ ಶೀರ್ಷಿಕೆ ಅಡಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಬೋಪಯ್ಯ ಬಿಚಿಟ್ಟಿದ್ದಾರೆ.
ಬೋಪಯ್ಯ ಅವರ ಫೇಸ್ ಬುಕ್ ಸ್ಟೇಟಸ್ ಇಂತಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com