ಮೈಸೂರು: ಚಾಮುಂಡೇಶ್ವರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಅಚ್ಚರಿಗಳನ್ನು ನೀಡಿರುವ ಕ್ಷೇತ್ರವಾಗಿದೆ. 2006 ರ ಉಪ ಚುನಾವಣೆ ವೇಳೆ ಮತಎಣಿಕೆ ಮಾಡುವ ವೇಳೆ ಎಣಿಕೆಯನ್ನು ತಡೆ ಹಿಡಿಯಲಾಗಿತ್ತು.ಅದಾದ ನಂತರ ಜೆಡಿಎಸ್ ಶಿವ ಬಸವಯ್ಯ ವಿರುದ್ಧ ಕೇವಲ 257 ಮತಗಳಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.
12 ವರ್ಷದ ನಂತರ, ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಅದೇ ಕ್ಷೇತ್ರದಿಂದ ಮತ್ತೆ ಆಯ್ಕೆ ಬಯಸಿದ್ದಾರೆ. ಅದುವೇ ಒಂದು ಕಾಲದಲ್ಲಿ ತಮ್ಮ ನೆಚ್ಚಿನ ಸ್ನೇಹಿತನಾಗಿದ್ದ ಜಿ.ಟಿ ದೇವೇಗೌಡ ವಿರುದ್ದ ಕಣಕ್ಕಿಳಿದಿದ್ದಾರೆ.
ರಾಜಕೀಯವಾಗಿ ತಮಗೆ ಪುನರ್ಜನ್ಮ ನೀಡಿರುವ ಚಾಮುಂಡೇಶ್ವರಿಯಿಂದಲೇ ಸಿಎಂ ಸ್ಪರ್ಧಿಸಿರುವುದಕ್ಕೆ ಮತ್ತಷ್ಟು ಮಹತ್ವ ಬಂದಿದೆ. ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಯತೀಂದ್ರ ಅವರಿಗೆ ಬಿಟ್ಟು, ಅಹಿಂದ ಹೆಸರಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಮುಖ್ಯಮಂತ್ರಿ ಬೆನ್ನೆಲುಬಾಗಿ ನಿಂತಿದ್ದಾರೆ,.
ಜೆಡಿಎಸ್ ಕೇವಲ 210 ರಿಂದ 25 ಸೀಟುಗಳಲ್ಲಿ ಗೆಲುವು ಸಾಧಿಸರುವು ಕಷ್ಟ ಎಂದು ಜರಿದಿದ್ದ ಸಿದ್ದರಾಮಯ್ಯ ವಿರುದ್ದ ಸೇಡು ತೀರಿಸಿಕೊಳ್ಳಲು ಕುಮಾರ ಸ್ವಾಮಿ ಹವಣಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯಿಂದಾಗಿ ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಆಗಿ ನೋಡಬೇಕು ಎಂದು ಆಸೆ ಪಟ್ಟಿದ್ದ ಅವರ ಬೆಂಬಲಿಗರು ಹಾಗೂ ಒಕ್ಕಲಿಗ ಸಮುದಾಯದವರಿಗೆ ತೀವ್ರ ನಿರಾಸೆಯಾಗಿದೆ.
ಸಿಎಂ ವಿರುದ್ಧ ದಲಿತ ವಿರೋಧಿ ಎಂಬ ಆರೋಪ ಹೊಂದಿರುವ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಮತ್ತು ಎಚ್. ವಿಶ್ವನಾಥ್ ಹಗೆ ಸಾಧಿಸಿಕೊಳ್ಳಲು ಕಾಯುತ್ತಿದ್ದಾರೆ
ಆದರೆ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ, 12 ದಿನಗಳ ಕಾಲ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಿದ್ದಾರೆ,
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಗಲ್ಲಿ ಎಮೋಷನಲ್ ಕಾರ್ಡ್ ಪ್ಲೇ ಮಾಡಲಿದ್ದಾರೆ.ಈ ಹಿನ್ನೆಲೆಯಲ್ಲಿ ವೀರಶೈವ ಮಠಗಳ ಮುಖಂಡರನ್ನು ಭೇಟಿ ಮಾಡಿದ್ದಾರೆ.