ಶಿರಸಿ: ಶಿರಸಿ ಹಾಗೂ ಸಿದ್ದಾಪುರ ಕ್ಷೇತ್ರ ವಿಶಿಷ್ಟವಾಗಿದೆ. ಇದನ್ನು ತಿಳಿದೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದಾಪುರದಲ್ಲಿ ವರ್ಷದ ಹಿಂದೆ ಕೆರೆ ನಿರ್ಮಾಣ ಮಾಡಿದ್ವಿ. ಇಂದು ಅದನ್ನ ಮತ್ತು ನಿಮ್ಮನ್ನ ನೋಡಿದಂತಾಯ್ತು ಎಂದು ನಟ ಯಶ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಸಿದ್ದಾಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿ ಮಾತನಾಡಿದ ನಟ ಯಶ್ ಕಾಗೇರಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನನಗೆ ನಿಮ್ಮನ್ನು ನೋಡಿದರೆ ಖುಷಿಯಾಗುತ್ತದೆ. ಸಿಳ್ಳೆ, ಚಪ್ಪಾಳೆ ಕೇಳಿದರೆ ಸಂತೋಷವಾಗುತ್ತದೆ. ನೀವು ನನಗೆ ಬದುಕು ಕೊಟ್ಟಿದ್ದೀರಿ. ನಾನು ರಾಜಕಾರಣಿಯಾಗಿಲ್ಲ. ನನಗೆ ನಂಬಿಕೆ ಇರುವ ಜನರ ಪರ ನಾನು ಪ್ರಚಾರ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.