ಚಾಮರಾಜನಗರ: ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡಲು ಬಿಜೆಪಿ, ಬಿಎಸ್ಪಿ ಸಜ್ಜು

ಚುನಾವಣೆಗೆ ಒಂದು ವಾರವಷ್ತೇ ಬಾಕಿ ಇರುವಂತೆ ಚಾಮರಾಜನಗರದಲ್ಲಿ ಪ್ರಚಾರದ ಕಾವು ತಾರಕಕ್ಕೇರಿದೆ
ಚಾಮರಾಜನಗರ: ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡಲು ಬಿಜೆಪಿ, ಬಿಎಸ್ಪಿ ಸಜ್ಜು
ಚಾಮರಾಜನಗರ: ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡಲು ಬಿಜೆಪಿ, ಬಿಎಸ್ಪಿ ಸಜ್ಜು
Updated on: 
ಮೈಸೂರು: ಚುನಾವಣೆಗೆ ಒಂದು ವಾರವಷ್ತೇ ಬಾಕಿ ಇರುವಂತೆ ಚಾಮರಾಜನಗರದಲ್ಲಿ ಪ್ರಚಾರದ ಕಾವು ತಾರಕಕ್ಕೇರಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ-ಜೆಡಿಎಸ್ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು ಹಿಂದುಳಿದ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸತತ ಪ್ರಯತ್ನಕ್ಕೆ ಮುಂದಾಗಿವೆ.
ಕಾಂಗ್ರೆಸ್ ಪ್ರಬಲ ಕೋಟೆಯಾಗಿರುವ ಚಾಮರಾಜನಗರ ಕಾಂಗ್ರೆಸ್ ನ ನಾಲ್ವರು ಹಾಲಿ ಶಾಸಕರನ್ನು ಹೊಂದಿದೆ. ಹಿಂದುಳಿದ ಜಿಲ್ಲೆಯೆಂದೇ ಬ್ರ್ಯಾಂಡ್ ಆಗಿರುವ ಚಾಮರಾಜನಗರದ ಶೇ.40ರಷ್ಟು ಭಾಗ ಅರಣ್ಯಗಳಿಂದ ಆವರಿಸಿದೆ. ಅಲ್ಲದೆ ಈ ಪ್ರದೇಶವನ್ನು ಬರಪೀಡಿತ ಭಾಗವೆಂದು ಗುರುತಿಸಲಾಗುತ್ತ್ದೆ.
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಉಪ್ಪಾರ ಸಮುದಾಯದ ಏಕೈಕ ಶಾಸಕರಾಗಿದ್ದು ತಮ್ಮ ಹ್ಯಾಟ್ರಿಕ್ ವಿಜಯಕ್ಕಾಗಿ ಶ್ರಮಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಪ್ರಸಿದ್ದರಾದಶೆತ್ಟಿ ಅಹಿಂದ ಮತಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನಲಾಗಿದೆ. ಜತೆಗೆ ಜಿಲ್ಲಾ ಕಾಂಗ್ರೆಸ್ ಗೆ ಸಂಸದ ಆರ್ ದ್ರವನಾರಾಯಣ ಹಾಗೂ  ದಲಿತ ನಾಯಕ ಎ.ಆರ್.ಕೃಷ್ಣ ಮೂರ್ತಿ ಅವರುಗಳ ಬೆಂಬಲವೂ ಲಭಿಸಲಿದೆ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ವೀರಶೈವ ಸಮುದಾಯದ ಪ್ರೊ. ಮಲ್ಲಿಕಾರ್ಜುನಪ್ಪ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜಿಲ್ಲೆಯಲ್ಲಿ ಪ್ರಬಲರಾಗಿರುವ ಪರಿವಾರ, ತಳವಾರ ಸಮುದಾಯದವರನ್ನು ಎಸ್ಸಿ ವಿಭಾಗಕ್ಕೆ ಸೇರಿಸುವ ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಸಮ್ಮತಿಸಿರುವುದು ಬಿಜೆಪಿಗೆ ಶಕ್ತಿ ತುಂಬಿದೆ.
ಅಂತೆಯೇ ಮಲ್ಲಿಕಾರ್ಜುನಪ್ಪ ಅವರಿಗೆ ವಿ. ಶ್ರೀನಿವಾಸಪ್ರಸಾದ್ ಅವರ ಬೆಂಬಲವೂ ದೊರಕಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com