ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡುತ್ತೇನೆ: ವಿಜಯೇಂದ್ರ

ಬಂದಷ್ಟೇ ವೇಗವಾಗಿ ಪ್ರಚಾರ ಪಡೆದು ಅಷ್ಟೇ ವೇಗವಾಗಿ ವರುಣಾ ಕ್ಷೇತ್ರದಿಂದ ಹಿಂದೆ ಸರಿದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವೈ ವಿಜಯೇಂದ್ರ...
ವಿಜಯೇಂದ್ರ
ವಿಜಯೇಂದ್ರ
Updated on: 
ಮೈಸೂರು:  ಬಂದಷ್ಟೇ ವೇಗವಾಗಿ ಪ್ರಚಾರ ಪಡೆದು ಅಷ್ಟೇ ವೇಗವಾಗಿ ವರುಣಾ ಕ್ಷೇತ್ರದಿಂದ ಹಿಂದೆ ಸರಿದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವೈ ವಿಜಯೇಂದ್ರ ರಾಜ್ಯ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗಳ ತಯಾರಿಗೆ ಸಂಬಂಧಿಸಿದಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಟಿಕೆಟ್ ತಪ್ಪಿದ ನಂತರ ಚಾಮರಾಜನಗರ-ಮೈಸೂರು ಕ್ಷೇತ್ರಗಳಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿದ್ದೀರಲ್ಲಾ?
ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ನಾನು ಕಣ್ಮರೆಯಾಗುತ್ತೇನೆ ಎಂದು ಭಾವಿಸಿದ್ದರು, ನಾನು ಒಬ್ಬ ಶಾಸಕನಾಗುವುದಕ್ಕಿಂತ ಮುಖ್ಯವಾದದ್ದು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಶಾಕ್ ನೀಡುವುದಾಗಿದೆ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವುದು ನಮಗೆ ಮುಖ್ಯವಾಗಿದೆ.
ರಾತ್ರೋರಾತ್ರಿ ಮೈಸೂರಿನಲ್ಲಿ ಹೇಗೆ ಜನಪ್ರಿಯತೆ ಪಡೆದಿರಿ?
15 ದಿನಗಳಲ್ಲಿ ನಾನು ಎಲ್ಲಾ ದಲಿತ ಕಾಲೋನಿಗಳಿಗೆ ಭೇಟಿ ನೀಡಿದ್ದೆ, ನಾನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಎಂದು ತಿಳಿದಾಗ ಅಲ್ಲಿನ ಜನ ನನ್ನನ್ನು ತುಂಬಾ ಇಷ್ಟ ಪಟ್ಟರು. ಜನ ಸಿದ್ದರಾಮಯ್ಯ ವಿರುದ್ದ ಬೇಸರ ಹಾಗೂ ಅಸಮಾಧಾನ ಗೊಂಡಿದ್ದಾರೆ.
ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕಡಿಮೆ ಮಾಡು ಎನು ಮಾಡುತ್ತೀರಿ?
ಸಿದ್ದರಾಮಯ್ಯ ಅವರ ವರ್ಚಸ್ಸು ಕೆಲ ಏಜೆನ್ಸಿಗಳಿಂದ  ನಿರ್ವಹಿಸಲ್ಪಡುತ್ತಿದೆ,. ಪೂರ್ತಿ ಪೇಜ್ ನಲ್ಲಿ ಜಾಹೀರಾತು ಮತ್ತು ಘೋಷಣೆಗಳನ್ನು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಜನಪ್ರಿಯ ಅನ್ನಭಾಗ್ಯ ಯೋಜನೆಯಿಂದ ಜನಪ್ರಿಯರಾಗಿದ್ದಾರೆ.
ನೀವು ಮತ್ತು ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರು ಎನ್ನಲಾಗುತ್ತಿದೆಯಲ್ಲ? 
ಯಡಿಯೂರಪ್ಪ ಅವರನ್ನು ಲಿಂಗಾಯತ ನಾಯಕರೆಂದು ಕಾಂಗ್ರೆಸ್ ಪಕ್ಷ ಬ್ರಾಂಡ್ ಮಾಡಿರುವುದು ದುರಾದೃಷ್ಠ, ಅವರ 5 ದಶಕಗಳ ರಾಜಕೀಯ ಜೀವನದಲ್ಲಿ ಅವರನ್ನು ಯಾರು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ, ಸಮುದಾಯ ಹೆಸರು ಹೇಳಿಕೊಂಡು ಗುರುತಿಸಿಕೊಳ್ಳುವುದು ಅವಮಾನಕರ ವಿಷಯ.
ಯಡಿಯೂರಪ್ಪ ಅವರ ಅಧಿಕಾರ ಮೊಟಕುಗೊಳಿಸಲು ನಿಮಗೆ ಟಿಕೆಟ್ ನಿರಕಾರಿಸಲಾಯಿತೆ?
ಯಡಿಯೂರಪ್ಪ ಅವರ ಪವರ್ ಕಡಿಮೆ ಮಾಡಲು ಸಾಧ್ಯವಿಲ್ಲ, ಹಾಗಿದ್ದರೇ ಅವರನ್ನು ಸಿಎಂ ಅಭ್ಯರ್ಥಿ ಎಂದು ಏಕೆ ಘೋಷಿಸುತ್ತಿದ್ದರು, ಮೋದಿ ಅವರ ನಿಲುವಿಗೆ ನಾನು ಬೆಲೆ ಕೊಡುತ್ತೇನೆ,
ವರುಣಾದಲ್ಲಿ ಏಕೆ ಪ್ರಚಾರ ಮಾಡುತ್ತಿದ್ದೀರಾ?
ರಾಜಕೀಯಕ್ಕೆ ಪ್ರವೇಶಿಸುವ ವೇಳೆ ಪಕ್ಷ ಬಂಗಾರಪ್ಪ ಅವರ ವಿರುದ್ಧ ನನ್ನ ಅಣ್ಣನನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ನಾನು ವರುಣಾ ಕ್ಷೇತ್ರಕ್ಕೆ ಬಂದಾಗ ಟಿಕೆಟ್ ಆಕಾಂಕ್ಷಿಗಳು ನಾನು ಸಿದ್ದರಾಮಯ್ಯ  ಅವರ ವಿರುದ್ಧ ಸ್ಪರ್ದಿಸುವಂತೆ ಹೇಳಲಾಯಿತು. ಆದರೆ ಯತೀಂದ್ರ ಸ್ಪರ್ಧಿಸುತ್ತಾರೆ ಎಂದು ತಿಳಿದಿದ್ದರೇ ನಾನು ಇಲ್ಲಿಗೆ  ಬರುತ್ತಿರಲಿಲ್ಲ.
ಮೇ15 ರ ನಂತರ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತೀರಾ?
ನನ್ನನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಕ್ಕೆ ಧನ್ಯವಾದಗಳು ಮುಂದಿನ ಲೋಕಸಭೆ ಚುನಾವಣೆಗೆ ಯುವ ಮೋರ್ಚಾ ಸಿದ್ಧತೆ ನಡೆಸುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com