ಪ್ರಚಾರಕ್ಕಾಗಿ ಸೋನಿಯಾ ಗಾಂಧಿ ವಿಜಯಪುರ ಜಿಲ್ಲೆ ಆರಿಸಿಕೊಂಡಿದ್ದು ಏಕೆ ಗೊತ್ತಾ?

ಮೇ 12 ರಂದು ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಕೇವಲ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಪ್ರಚಾರ ನಡೆಸಿದ್ದಾರೆ.....
ಸೋನಿಯಾ ಗಾಂಧಿ ಮತ್ತು ಎಂ.ಬಿ ಪಾಟೀಲ್
ಸೋನಿಯಾ ಗಾಂಧಿ ಮತ್ತು ಎಂ.ಬಿ ಪಾಟೀಲ್
Updated on: 
ವಿಜಯಪುರ: ಮೇ 12 ರಂದು ನಡೆಯುವ ರಾಜ್ಯ ವಿಧಾನ ಸಭೆ ಚುನಾವಣೆಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಕೇವಲ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಪ್ರಚಾರ ನಡೆಸಿದ್ದಾರೆ. ಇದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಮೇಲಿನ ವಿಶ್ವಾಸಕ್ಕೋ ಅಥವಾ ವಿಜಯಪುರ ಜಿಲ್ಲೆಯ ಮೇಲಿನ ಪ್ರೀತಿಗೋ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ರಾಜ್ಯ ಕಾಂಗ್ರೆಸ್ ಮುಖಂಡರು ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬೇಕೆಂದು ಸೋನಿಯಾ ಗಾಂಧಿ ಅವರಲ್ಲಿ ಮನವಿ ಮಾಡಿದ್ದರು, ಆದರೆ ಅವರ ಆರೋಗ್ಯದ ಕಾರಣದಿಂದಾಗಿ ಮುಂಬಯಿ-ಕರ್ನಾಟಕ ಪ್ರದೇಶದಲ್ಲಿ ಮಾತ್ರ ಪ್ರಚಾರ ಮಾಡುವಂತೆ ಕೇಳಿಕೊಳ್ಳಲಾಯಿತು. ಹುಬ್ಬಳ್ಳಿ, ಬೆಳಗಾವಿ ಮತ್ತು ವಿಜಯಪುರ ಮೂರು ಜಿಲ್ಲೆಗಳ ಪೈಕಿ ಒಂದರಲ್ಲಿ ಪ್ರಚಾರ ನಡೆಸುವಂತೆ ಕೇಳಿಕೊಳ್ಳಲಾಯಿತು.
ಈ ವೇಳೆ ಅವರು ವಿಜಯಪುರ ಜಿಲ್ಲೆ ಆಯ್ಕೆ ಮಾಡಿಕೊಂಡರು. ಈ ಹಿಂದೆ ಸೋನಿಯಾ ಗಾಂಧಿ ಈ ಜಿಲ್ಲೆಯಲ್ಲಿ ಅಕ್ಕ ಮಹಾದೇವಿ ಮಹಿಳಾ ವಿವಿ ಉದ್ಘಾಟಿಸಿದ್ದರು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಪಾಟೀಲ್ ಸ್ಪರ್ಧಿಸಿರುವ  ಬಬಲೇಶ್ವರ ಕ್ಷೇತ್ರಕ್ಕೆ ಸೇರಿದ ಸಾರವಾಡ್ ಗ್ರಾಮದಲ್ಲಿ ಮೋದಿ ಪ್ರಚಾರ ಮಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್ ತಮ್ಮ ಬೆಳವಣಿಗೆ ರಾಷ್ಟ್ರ ಮಟ್ಟದಲ್ಲಿ ತಮ್ಮ ಮಹತ್ವವನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ. ಮೋದಿ ಮತ್ತು ಅಮಿತ್ ಶಾ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ತಾವೇ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು. 
ಕರ್ನಾಟಕದಾದ್ಯಂತ ಮೋದಿ  ಸಂಚರಿಸಿ ಪ್ರಚಾರ ಮಾಡುತ್ತಿದ್ದಾರೆ, ಮೋದಿ ಕರ್ನಾಟಕದ ಸಿಎಂ ಆಗಲು ಬಯಸಿದ್ದಾರೆಯೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸುಳ್ಳಿನ ನಾಯಕ ಎಂದು ಜರಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com