ಈ ಬಾರಿ ಆಪರೇಷನ್ ಕಮಲ ಕೆಲಸ ಮಾಡೋಲ್ಲ: ಕುಮಾರ ಸ್ವಾಮಿ

: ಕರ್ನಾಟಕದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಈ ಬಾರಿ ಆಪರೇಷನ್ ಕಮಲದ ಆಟ ನಡೆಯೋದಿಲ್ಲ ಎಂದು ಪದೇ ...
ರಾಜಭವನದ ಮುಂದೆ ಎಚ್.ಡಿ ಕುಮಾರ ಸ್ವಾಮಿ
ರಾಜಭವನದ ಮುಂದೆ ಎಚ್.ಡಿ ಕುಮಾರ ಸ್ವಾಮಿ
Updated on: 
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು  ಈ ಬಾರಿ ಆಪರೇಷನ್ ಕಮಲದ ಆಟ ನಡೆಯೋದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ.
2008 ರಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿತ್ತು, ಆದರೆ ಈ ಬಾರಿ ಅದು ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಇನ್ನೂ ಕುಮಾರ ಸ್ವಾಮಿ ಹೇಳಿಕೆಗೆ ಬೆಂಬಲ ಸೂಚಿಸಿರುವ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಆಪರೇಷನ್ ಕಮಲ ದಲ್ಲಿ ಬಿಜೆಪಿ ನಾಯಕರು ಪರಿಣತರು, ಆದರೆ ಆ ಟ್ರಿಕ್ ಸದ್ಯದ ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.  
ಮಂಗಳವಾರ ಬಿಜೆಪಿ ಮುಖಂಡ ಬಿ.ಎಸ್ ಯಡಿಯೂರಪ್ಪ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಜಿ ಬಹುಮತ ಸಾಬೀತು ಪಡಿಸಲು ಸಮಯಾವಕಾಶ ಕೋರಿದ್ದಾರೆ. 
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಬಂದಿದ್ದು ಅದಕ್ಕಾಗಿ ಮೊದಲು ಸರ್ಕಾರ ರಚಿಸಲು ನಮಗೆ ಆಹ್ವಾನ ನೀಡಬೇಕು ಎಂದು ಕೋರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com