ಕೆ.ಆರ್ ನಗರ ಶಾಸಕ ಹಾಗೂ ಸತಚಿವ ಸಾ.ರಾ ಮಹೇಶ್ ಕುರುಬ ವಿರೋಧಿ, ಸಿದ್ದರಾಮಯ್ಯ ಭಾಗವಹಿಸುವ ಯಾವುದೇ ಸುಮದಾಯದ ಕಾರ್ಯಕ್ರಮಗಳಲ್ಲಿ ಮಹೇಶ್ ಪಾಲ್ಗೊಳ್ಳುವುದಿಲ್ಲ,. ಶಿಷ್ಟಾಚಾರ ಉಲ್ಲಂಘಿಸಿ ಮಹೇಶ್ ಅವರ ಹೆಸರನ್ನು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯ ಹೆಸರಿನ ಕೆಳಗೆ ಮುದ್ರಿಸಲಾಗಿತ್ತು. ಈ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಚುನಾವಣೆ ಬಹಿಷ್ಕರಿಸುವ ಹಂತ ತಲುಪಿತ್ತು.ನಾನು ಎಲ್ಲಾ ಸಮುದಾಯದವರ ಮತಗಳಿಂದ ಆರಿಸಿ ಬಂದಿದ್ದೇನೆ, ಹೀಗಾಗಿ ತಾವು ಸಮುದಾಯದ ಆಧಾರದ ಮೇಲೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಮಹೇಶ್ ಹೇಳಿದ್ದಾರೆ.