ಮಂಡ್ಯ ಬಿಜೆಪಿ ಅಭ್ಯರ್ಥಿ ಕುರಿತು ಟೀಕೆ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್ಐಆರ್

ರಾಮನಗರ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಂತೆ ಮಂಡ್ಯ ಲೋಕಸಭೆ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಸಹ ಹಿಂದೆ ಸರಿಯಲಿದ್ದಾರೆ ಎಂದುದ್ದ ಕಾಂಗ್ರೆಸ್ ಮುಖಂಡ, ಮಾಜಿ....
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ
Updated on: 
ಮಂಡ್ಯ: ರಾಮನಗರ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಂತೆ ಮಂಡ್ಯ ಲೋಕಸಭೆ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಸಹ ಹಿಂದೆ ಸರಿಯಲಿದ್ದಾರೆ ಎಂದುದ್ದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗೋಪಾಲಕೃಷ್ಣ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದೆ.
"ರಾಮನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಎಲ್. ಚಂದ್ರಶೇಖರ್ ಅವರಂತೆಯೇ ಮಂಡ್ಯ ಲೋಕಸಭೆ ಕಣದಿಂದ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಹಿಂದಕ್ಕೆ ಸರಿಯಲಿದ್ದಾರೆ.ಎಂದು ಗೋಪಾಲಕೃಷ್ಣ ಮಾದ್ಯಮಗಳಿಗೆ ಹೇಳಿಕೆ ನಿಡ್ದ್ದರು.
ಈ ಕುರಿತಂತೆ ಬಿಜೆಪಿ ನಾಯಕ, ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಡಾ. ಸಿದ್ದರಾಮಯ್ಯ ಚುನಾವಣಾಧಿಕಾರಿಗಳಿಗೆ ದೂರು  ಸಲ್ಲಿಸಿದ್ದು ಗೋಪಾಲಕೃಶ್ಣ ಅವರ ಹೇಳಿಕೆಯಿಂದ ತನ್ನಾ ವ್ಯಕ್ತಿತ್ವಕ್ಕೆ ಕುಂದಾಗುತ್ತದೆ, ಮತದಾರರ ಮೇಲೆ ಇದು ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದರು.
ಡಾ. ಸಿದ್ದರಾಮಯ್ಯ ಅವರ ದೂರಿನ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಚುನಾವಣಾಧಿಕಾರಿಗಳು ಸೂಚಿಸಿದ್ದ ಕಾರಣ ಮಂಡ್ಯ ಪೋಲೀಸರು ಮಾಜಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಐಪಿಸಿ ಸೆಕ್ಷನ್ 171ಜಿ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಮಂಡ್ಯ ಲೋಕಸಭಾ ಉಪಚುನಾವಣೆಗೆ ಶನಿವಾರ ಮತದಾನ ನಡೆದಿದ್ದು ಡೇ. 53.93ರಷ್ಟು ಮತದಾನವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com