ಇನ್ನೂ ಬಿಜೆಪಿ ಕೂಡ ಸುಮ್ಮನೆ ಕೂತಿಲ್ಲ, ಬುಧವಾರ ರಾಮನಗರ ಬಿಜೆಪಿ ಕಾರ್ಯಕರ್ತರು ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಮೈತ್ರಿ ಸರ್ಕಾರದ ಪಾಲು ದಾರ ಪಕ್ಷಗಳನ್ನು ಸೋಲಿಸಲು ಚುನಾವಣಾ ರಣತಂತ್ರದ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ, ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರಿಗೆ ರಾಮಗರದಿಂದ ಟಿಕೆಟ್ ಕೊಡಲು ಬಿಜೆಪಿ ನಿರ್ಧರಿಸಿದೆ, ಇನ್ನೂ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ ರುದ್ರೇಶ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಚನ್ನಪಟ್ಟಣದಲ್ಲಿ ಸ್ಪರ್ದಿಸಿದ್ದ ಯೋಗೇಶ್ವರ್ ಕುಮಾರ ಸ್ವಾಮಿ ವಿರುದ್ಧ ಸೋತಿದ್ದರು.