ತಮ್ಮ ಅಸಮಾಧಾನ ಶಮನವಾಗಲು ಜಾರಕಿಹೊಳಿ ಸಹೋದರರು ಹಲವು ಷರತ್ತುಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ,'' ಬೆಳಗಾವಿಯ ಎಲ್ಲಾ ವ್ಯವಹಾರಗಳ ಮೇಲೆ ತಮ್ಮ ಹಿಡಿತ ಇರಬೇಕು, ಮುಂದಿನ ಸಂಪುಟ ವಿಸ್ತರಣೆಗೆ ಯಾರನ್ನೂ ಸಚಿವರನ್ನಾಗಿಸಬೇಕು ಎಂಬ ಆಯ್ಕೆ ಸ್ವಾತಂತ್ರ್ಯ ನೀಡಬೇಕು, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತೆಗೆದು ಹಾಕಬೇಕು, ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವ ಹಕ್ಕನ್ನು ತಮಗೆ ನೀಡಬೇಕು, ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ,ಕೆ ಶಿವ ಕುಮಾರ್ ಬೆಳಗಾವಿ ರಾಜಕೀಯದಲ್ಲಿ ತಲೆ ಹಾಕಬಾರದು, ಬೆಳಗಾವಿ ಕಾಂಗ್ರೆಸ್ ವಿಷಯದಲ್ಲಾಗಲಿ, ಅಧಿಕಾರಿಗಳ ವರ್ಗಾವಣೆಯಲ್ಲಾಗಲಿ ಶಿವಕುಮಾರ್ ಮೂಗು ತೂರಿಸಬಾರದು, ಇದನ್ನು ಸಹಿಸಲಾಗದು'' ಎಂದು ಸತೀಶ್ ಜಾರಕಿಹೊಳಿ ತಮ್ಮ ಬೇಡಿಕೆ ಇಟ್ಚಿದ್ದಾರೆ ಎಂದು ಹೇಳಲಾಗಿದೆ,