ಬೆಂಗಳೂರು: ಕ್ರಿಕೆಟ್ ಮತ್ತಿತರ ಆಟಗಳಲ್ಲಿ ಬೆಟ್ಟಿಂಗ್ ನಡೆಯೋದನ್ನು ಕೇಳಿದ್ದೇವೆ, ಈಗ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಂಡಿಸುವ ಬಜೆಟ್ ಮೇಲೂ ಬೆಟ್ಟಿಂಗ್ ಕಟ್ಟಲಾಗಿದೆ. ಬಿಜೆಪಿಗೆ ಸವಾಲು ಹಾಕಿರುವ ಶಾಸಕ ಮುನಿರತ್ನ, ತಾವು ನಿರ್ಮಿಸಿರುವ ಅದ್ದೂರಿ ಬಜೆಟ್ ನ ಕುರುಕ್ಷೇತ್ರ ಸಿನಿಮಾವನ್ನೇ ಪಣಕ್ಕಿಟ್ಟಿದ್ದಾರೆ.
ಮಾಜಿ ಸಿಎಂ ಡಿ,ವಿ ಸದಾನಂದಗೌಡ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ ಫೆ.8ರಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ. ಒಂದು ವೇಳೆ ಕುಮಾಸ್ವಾಮಿ ಬಜೆಟ್ ಮಂಡಿಸಿಲ್ಲ ಎಂದರೆ ಕುರುಕ್ಷೇತ್ರ ಸಿನಿಮಾವನ್ನು ಬಿಜೆಪಿಯವರಿಗೆ ಕೊಟ್ಟು ಬಿಡುತ್ತೇನೆ ‘ ಎಂದು ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
ಬಿಜೆಪಿಯಲ್ಲಿ ಹಲವು ನಿರ್ದೇಶಕರು, ನಿರ್ಮಾಪಕರು ಹಾಗೂ ಸಿನಿಮಾ ಕಲಾವಿದರಿದ್ದಾರೆ, ಅವರಿಗೆ ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಕುರುಕ್ಷೇತ್ಕ ಸಿನಿಮಾವನ್ನು ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದಾರೆ,.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಬಹುನಿರೀಕ್ಷೆಯ ಚಿತ್ರ ಕುರುಕ್ಷೇತ್ರ ಚಿತ್ರವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ.