'ಕೈ' ಬೆಂಬಲದ ನಿರೀಕ್ಷೆಯಲ್ಲಿದ್ದ 'ರೈ'ಗೆ ನಿರಾಶೆ: ಮೋದಿ -ಅಮಿತ್ ಶಾ ಹೊರತು ಪಡಿಸಿ ಎಲ್ಲ ನಾಯಕರ ಭೇಟಿ

ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ನಟ ಪ್ರಕಾಶ್ ರೈ ಕಾಂಗ್ರೆಸ್ ಬೆಂಬಲ ಕೋರಿದ್ದರು, ಆದರೆ ಪ್ರಕಾಶ್ ರೈ ಅವರಿಗೆ...
ಪ್ರಕಾಶ್ ರೈ
ಪ್ರಕಾಶ್ ರೈ
Updated on: 
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ನಟ ಪ್ರಕಾಶ್ ರೈ ಕಾಂಗ್ರೆಸ್ ಬೆಂಬಲ ಕೋರಿದ್ದರು, ಆದರೆ ಪ್ರಕಾಶ್ ರೈ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಯಿಂದ ರೈ ನಿರಾಶೆಗೊಳಗಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ನಾವು ಹೇಗೆ ಬೆಂಬಲ ನೀಡಲು ಸಾಧ್ಯ, ಒಂದು ವೇಳೆ ಪ್ರಕಾಶ್ ರೈ ಅವರು ಕಾಂಗ್ರೆಸ್ ಪಕ್ಷ ಸೇರಿದರೆ ಬೆಂಬಲ ನೀಡುವ ಯೋಚನೆ ಮಾಡಬಹುದು ಎಂದಿದ್ದಾರೆ. 
ಬೆಂಗಳೂರು ಸೆಂಟ್ರಲ್ ನಿಂದ ಸ್ವತಂತ್ರ್ಯವಾಗಿ ಸ್ಪರ್ಧಿಸಲು ಬಯಸಿರುವ ಪ್ರಕಾಶ್ ರೈ ತಮಗೆ ಬೆಂಬಲ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ  ಅವರನ್ನು ಭೇಟಿ ಆಗಿ ಮನವಿ ಮಾಡಿದ್ದರು, ಆದರೆ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ.
ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಪ್ರಕಾಶ್ ರೈ ಹೋರಾಡಬೇಕಿದೆ. ಪ್ರಸ್ತುತ ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಬಿಜೆಪಿಯ ವಶದಲ್ಲಿದ್ದು, ಪಿ.ಸಿ.ಮೋಹನ್ ಸಂಸದರಾಗಿದ್ದಾರೆ. 
ಮೋದಿ ಮತ್ತು ಅಮಿತ್ ಶಾ ಹೊರತು ಪಡಿಸಿ, ಜಾತ್ಯಾತೀತ ಪಕ್ಷದ ನಾಯಕರನ್ನು ಭೇಟಿ ಮಾಡುವಲ್ಲಿ ನನಗೆ ಯಾವುದೇ ತೊಂದರೆಯಿಲ್ಲ, ಎಂದು ಹೇಳಿರುವ ಪ್ರಕಾಶ್ ರೈ,ನಾವೆಲ್ಲರೂ ಒಗ್ಗಟ್ಟಾಗುವ ಸಮಯ ಇದು, ಜಾತ್ಯಾತೀತ ನಾಯಕರು ಪರಸ್ಪರ ಬೆಂಬಲ  ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com