ಹೆಚ್ ಡಿ ದೇವೇಗೌಡ-ದಿನೇಶ್ ಗುಂಡೂರಾವ್ ಭೇಟಿ: ಸೀಟು ಹಂಚಿಕೆ ಮಾತುಕತೆ

ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ ಬಗ್ಗೆ ...
ಹೆಚ್ ಡಿ ದೇವೇಗೌಡ-ದಿನೇಶ್ ಗುಂಡೂರಾವ್
ಹೆಚ್ ಡಿ ದೇವೇಗೌಡ-ದಿನೇಶ್ ಗುಂಡೂರಾವ್
Updated on: 
ಬೆಂಗಳೂರು: ಲೋಕಸಭೆ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಯುತ್ತಿದ್ದು ನಿನ್ನೆ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ದಿನೇಶ್ ಗುಂಡೂರಾವ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ದೇವೇಗೌಡ ಭೇಟಿಯಾಗಿದ್ದಾರೆ.
ಸೀಟು ಹಂಚಿಕೆ ಕುರಿತು ಒಮ್ಮತಕ್ಕೆ ಬರಲು ಕಾಂಗ್ರೆಸ್ ನ ಮೊದಲ ಪ್ರಯತ್ನ ಇದಾಗಿದೆ. ರಾಜ್ಯ ಮಟ್ಟದ ಮಾತುಕತೆ ಮೂಲಕ ಹೆಚ್ ಡಿ ದೇವೇಗೌಡರ ಮನವೊಲಿಸಲು ರಾಜ್ಯ ಕಾಂಗ್ರೆಸ್ ನಾಯಕರು ಉತ್ಸುಕವಾಗಿದ್ದರೆ ದೇವೇಗೌಡರು ಮಾತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮಾತುಕತೆಗೆ ಒಲವು ತೋರಿಸಿದ್ದಾರೆ.
ದೇವೇಗೌಡರ ಜೊತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಈ ತಿಂಗಳ ಒಳಗೆ ಸೀಟು ಹಂಚಿಕೆ ಮತ್ತು ಕ್ಷೇತ್ರಗಳ ಆಯ್ಕೆ ಅಂತಿಮವಾಗಬೇಕು ಎಂದು ನಾವು ಚರ್ಚಿಸಿದೆವು, ಇದೊಂದು ಸೌಹಾರ್ದಯುತ ಮಾತುಕತೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com