ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ರೆಸಾರ್ಟ್ ರಾಜಕೀಯ ಅಂತಿಮ ಘಟ್ಟ ತಲುಪಿದ್ದು, ಆಪರೇಷನ್ ಕಮಲ ಮಾಡಿಯೇ ತೀರುತ್ತೇವೆ ಎಂದು ಹರಿಯಾಣದ ಗುರುಗ್ರಾಮ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರು ಮತ್ತು ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ ಎಂದು ಪಣತೊಟ್ಟಿದ್ದ ಕೈ ಅತೃಪ್ತ ಶಾಸಕರು ಯಾವುದೂ ಸಾಕಾರಗೊಳ್ಳದ ಕಾರಣ ಒಬ್ಬೊಬ್ಬರಾಗಿ ದೆಹಲಿ, ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.