ಅಥ್ಲೀಟ್ ಅಂಜು ಬಾಬಿ ಬಿಜೆಪಿ ಸೇರ್ಪಡೆ

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ , ಅಥ್ಲೀಟ್ ಅಂಜು ಬಾಬಿ ಜಾರ್ಜ್ , ಇನ್ಪೋಸಿಸ್ ಉಪಾಧ್ಯಕ್ಷ ಪಾರ್ಥ ಸಾರಥಿ ಸೇರಿದಂತೆ ಹಲವು ಬಿಜೆಪಿ ಸೇರುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
ಅಂಜು ಬಾಬು ಜಾರ್ಜ್
ಅಂಜು ಬಾಬು ಜಾರ್ಜ್
Updated on
ಬೆಂಗಳೂರು: ಒಲಿಂಪಿಕ್ಸ್  ಕಂಚಿನ ಪದಕ ವಿಜೇತೆ , ಅಥ್ಲೀಟ್ ಅಂಜು ಬಾಬಿ ಜಾರ್ಜ್ , ಇನ್ಪೋಸಿಸ್ ಉಪಾಧ್ಯಕ್ಷ ಪಾರ್ಥ ಸಾರಥಿ ಸೇರಿದಂತೆ ಹಲವು ಬಿಜೆಪಿ ಸೇರುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ ಭಾಗವಹಿಸಿದ್ದರು.ಅಂಜು ಬಾಬಿ ಜಾರ್ಜ್ ಹಾಗೂ ಇತರರಿಗೆ ಯಡಿಯೂರಪ್ಪ ಅವರು ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ರಾಜ್ಯ ಸದಸ್ಯತ್ವ ಅಭಿಯಾನ ಉಸ್ತುವಾರಿ ಎನ್. ರವಿಕುಮಾರ್ ಮಾತನಾಡಿ, ಬಿಜೆಪಿಯ ಸದಸ್ಯತ್ವ 20 ಕೋಟಿ ದಾಟಲಿದೆ ಎಂದರು. ಆಟೋ ಚಾಲಕರು, ಪ್ರಥಮ ಬಾರಿ ಮತದಾರರಾದ ಯುವಕರು ಕೂಡಾ ಇದೇ ಸಂದರ್ಭದಲ್ಲಿ ಸದಸ್ಯತ್ವ ನೋಂದಾಯಿಸಿದರು.
 ಸಂಸದ ಪಿ. ಸಿ. ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮತ್ತಿತರರು ಹಲವು ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com