ಪ್ರದೇಶಾಭಿವೃದ್ಧಿ ಅನುದಾನ ಸದ್ಬಳಕೆಯಲ್ಲಿ ಶಾಸಕರ ನಿರಾಸಕ್ತಿ: ನಿಧಿಯಲ್ಲಿ ಕೊಳೆಯುತ್ತಿದೆ ನೂರಾರು ಕೋಟಿ !

ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸದ್ಬಳಕೆಯಲ್ಲಿ ಮೈತ್ರಿ ಶಾಸಕರು ಹಿಂದುಳಿದಿದ್ದಾರೆ. ಶಾಸಕರ ನಿಧಿಯ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಶಾಸಕರು ಆಸಕ್ತಿ ...
ಕುಮಾರಸ್ವಾಮಿ
ಕುಮಾರಸ್ವಾಮಿ
Updated on: 
ಬೆಂಗಳೂರು: ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸದ್ಬಳಕೆಯಲ್ಲಿ ಮೈತ್ರಿ ಶಾಸಕರು ಹಿಂದುಳಿದಿದ್ದಾರೆ. ಶಾಸಕರ ನಿಧಿಯ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಶಾಸಕರು ಆಸಕ್ತಿ ತೋರದಿರುವುದು ವಿಪರ್ಯಾಸವಾಗಿದೆ.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿ ವರ್ಷ ಅಭಿವೃದ್ಧಿ ಕೆಲಸಗಳಿಗಾಗಿ 2 ಕೋಟಿ ರು ವರೆಗೆ ಹಣ ಪಡೆಯಬಹುದಾಗಿದೆ, ಆದರೆ 31 ವಿಧಾನಸಭೆ ಸದಸ್ಯರು ಹಾಗೂ 36 ವಿಧಾನ ಪರಿಶತ್ ಸದಸ್ಯರು ಇದುವರೆಗೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ, 
ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಸೇರಿದಂತೆ  ಇತರ ಶಾಸಕರು  ಅನುದಾನ ಹಣವನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿಎಂ ಪತ್ರದ ಪ್ರಕಾರ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಐದು ಅಭಿವೃದ್ದಿ ಕೆಲಸಗಳಿಗಾಗಿ 22 ಲಕ್ಷ ರು ಪ್ರಸ್ತಾವನೆ ಸಲ್ಲಿಸಿದ್ದರು, ಅವರು 2 ಕೋಟಿ ರು ವರೆಗೆ ಅನುದಾನ ಪಡೆದುಕೊಳ್ಳಬಹುದಾಗಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು ಪ್ರದೇಶಾಭಿವೃದ್ಧಿ ಹಣ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರಿಗೆ ತಿಳಿಸಿದ್ದಾರೆಹೀಗಾಗಿ ಶಾಸಕರ ನಿಧಿಯಲ್ಲಿ ನೂರಾರು ಕೋಟಿ ಹಣ ಕೊಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com