ರಾಜಕೀಯ

ಹೆಣ್ಣಿಗೋಸ್ಕರ ನಡೀತಾ ಫೈಟ್?: ಶಾಸಕರಾದ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಫೈಟ್ ವಿಡಿಯೋ ಬಹಿರಂಗ!

ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಹೊಡೆದಾಡಿಕೊಂಡಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ.

ಹೆಣ್ಣಿಗೋಸ್ಕರ ನಡೀತಾ ಫೈಟ್?: ಶಾಸಕರಾದ ಕಂಪ್ಲಿ ಗಣೇಶ್, ಆನಂದ್ ಸಿಂಗ್ ಫೈಟ್ ವಿಡಿಯೋ ಬಹಿರಂಗ!
ಸಂಗ್ರಹ ಚಿತ್ರ
Published On :
ಬೆಂಗಳೂರು: ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಹೊಡೆದಾಡಿಕೊಂಡಿದ್ದ ವಿಡಿಯೋ ಇದೀಗ ಬಹಿರಂಗವಾಗಿದೆ.
ಆಪರೇಷನ್ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಿತ್ತು. ಈ ವೇಳೆ ಗಣೇಶ್ ಮತ್ತು ಆನಂದ್ ಸಿಂಗ್ ಆವಾಚ್ಯ ಶಬ್ದಗಳಿಂದ  ಹೊಡೆದಾಡಿಕೊಂಡಿದ್ದು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ವಿಡಿಯೋದಲ್ಲಿ ಆ ಮಹಿಳೆ ಎಂಬ ಮಾತುಗಳು ಕೇಳಿಬಂದಿದೆ. ಇಬ್ಬರ ಜಗಳಕ್ಕೆ ಕಾರಣವಾದ ಈ ಮಹಿಳೆ ಯಾರೆಂಬುದರ ಬಗ್ಗೆ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಆರಂಭಗೊಂಡಿದೆ. ಮೇಲ್ನೋಟಕ್ಕೆ ಮಹಿಳೆಗಾಗಿಯೇ ಈ ಜಗಳ ನಡೆದಿದೆ ಎಂದು ದೃಶ್ಯಗಳು ಹೇಳುತ್ತಿವೆ. 
ರೆಸಾರ್ಟ್ ಸೇರಿದ ಶಾಸಕರು ಅಂದು ರಾತ್ರಿ ಪಾರ್ಟಿ ಮಾಡಿದ್ದರು. ಈ ವೇಳೆ ಮದ್ಯ ಸೇವನೆ ಮಾಡಿದ್ದ ಆನಂದ್ ಸಿಂಗ್ ನೇರವಾಗಿ ಗಣೇಶ್ ಕೋಣೆಗೆ ಎಂಟ್ರಿ ನೀಡಿದ್ರು, ಈ ವೇಳೆ ಕೋಣೆಯಲ್ಲಿ ಗಣೇಶ್ ಕೊರಳಪಟ್ಟಿ ಹಿಡಿದ ಆನಂದ್ ಸಿಂಗ್ ಜಗಳಕ್ಕೆ ನಿಂತಿದ್ದರು. ಆನಂದ್ ಸಿಂಗ್ ಹಲ್ಲೆಗೆ ಮುಂದಾಗುತ್ತಿದ್ದಂತೆ ಗಣೇಶ್ ಅಣ್ಣ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.